ಅಪ್ಪಾ ಇಲ್ಲ ಚಿತ್ರೀಕರಣ ಆರಂಭ
ಡಾ.ರಾಜ್ ಕುಮಾರ್ ಅವರನ್ನೇ ಕೇಂದ್ರವಾಗಿರಿಸಿಕೊಂಡು ಹೊಸ ಚಿತ್ರವೊಂದು ತಯಾರಾಗುತ್ತಿದೆ. ಅದುವೇ ಅಪ್ಪಾ ಇಲ್ಲ ಎಂಬ ಹೆಸರಿನ ಚಿತ್ರ.
ಇದನ್ನು ಮಾಡಲು ಹೊರಟವರು ಉಮೇದ್ ಸಿಂಗ್. ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ.ರಾಜ್ ಸಮಾಧಿಗೆ ಪೂಜೆ ಸಲ್ಲಿಸುವುದರೊಂದಿಗೆ ಇತ್ತೀಚೆಗೆ ಚಿತ್ರೀಕರಣ ಆರಂಭವಾಗಿದೆ. ಈ ಸಂದರ್ಭ ಹಲವಾರು ಗಣ್ಯರು ಕೂಡಾ ಭಾಗವಹಿಸಿದ್ದರು. ಕಂಡಲ್ ಪಾಲ್ ಮೂವೀಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.
ಕಥೆಯನ್ನು ಕೂಡ ಉಮೇದ್ ಸಿಂಗ್ ಅವರೇ ಬರೆದಿದ್ದು, ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡಕ್ಕೆ ಒಬ್ಬರೇ ರಾಜಣ್ಣರು, ಕರುನಾಡಿಗೆ ಒಬ್ಬರೇ ನಟರಾಜರು, ಮಹಾ ಪುರುಷರಾಗಿ ಜನನವಾದರು, ಮಹಾಯೋಗಿಯಾಗಿ ನಿಧನರಾದರು. ಎನ್ನುವ ಹಾಡನ್ನು ಕೂಡಾ ಅಲ್ಲಿ ಚಿತ್ರೀಕರಿಸಲಾಯಿತು.
ಇದೀಗ ಬೆಂಗಳೂರು ಸುತ್ತಮುತ್ತ ಅದರ ಚಿತ್ರೀಕರಣ ನಡೆಯುತ್ತಿದೆ.