ಉಪ್ಪಿ ಮಕ್ಕಳಾಗುತ್ತಿದ್ದಾರೆ. ತಮ್ಮ ಚಿತ್ರ ಮುಖಾಂತರ ಯುವಜನಾಂಗವನ್ನು ಮೋಡಿ ಮಾಡಿರುವ ಉಪ್ಪಿ ಇದೀಗ ಪುಟಾಣಿ ಮಕ್ಕಳನ್ನು ಮೋಡಿ ಮಾಡಲು ನಟಿಸುತ್ತಿದ್ದಾರೆ. ಹೌದು, ಇದು ಸಂಪೂರ್ಣ ಮಕ್ಕಳ ಚಿತ್ರ. ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್.
ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಭರದಿಂದ ಚಿತ್ರೀಕರಣಗೊಳ್ಳುತ್ತಿದೆ. ಮಕ್ಕಳ ಚಿತ್ರವನ್ನು ನಿರ್ದೇಶಿಸುವ ಮುಖಾಂತರ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿದ ಬಾಬು ಇದೀಗ ಮತ್ತೆ ಮಕ್ಕಳ ಚಿತ್ರದ ಕನಸು ಹೊತ್ತಿದ್ದು, ನೂತನ ಚಿತ್ರ ಜಯಭೇರಿ ಬಾರಿಸಲಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಮಕ್ಕಳ ಚಿತ್ರದಲ್ಲಿ ನಟಿಸುವ ಮೂಲಕ ಫುಲ್ ಖುಷಿ ಮೂಡ್ ನಲ್ಲಿರುವ ಉಪ್ಪಿ ಚಿತ್ರ ಯಶಸ್ವಿಯಾಗುವ ಬಗ್ಗೆ ತನ್ನ ಅನಿಸಿಕೆ ವ್ಯಕ್ತಪಡಿಸಿದರು. ಅಂದ ಹಾಗೆ ಉಪ್ಪಿಯವರಿಗೆ ಚಿತ್ರದಲ್ಲಿ ಸ್ಟಂಟ್ ಮಾಸ್ಟರ್ ಪಾತ್ರ.
ಚಿತ್ರದಲ್ಲಿ ಮಕ್ಕಳಿಗೆ ಉಪ್ಪಿ ಸ್ಟಂಟ್ ಹೇಳಿಕೊಡ್ತಾರೆ. ಒಟ್ಟಾರೆ ಶೂಟಿಂಗ್ ನಲ್ಲಿರುವ ಪುಟಾಣಿಗಳಿಗೆ ಉಪ್ಪಿ ಅಂಕಲ್ ಬಗ್ಗೆ ಭಾರೀ ಹೆಮ್ಮೆ. ತುಂಬಾನೇ ಸಪೋರ್ಟ್ ಮಾಡ್ತಾರೆ. ಅಂಕಲ್ ಜೋಕ್ ಹೇಳ್ತಾರೆ ಅಂತಾರೆ ಪುಟಾಣಿಗಳು