ಹೊಸ ಚಿತ್ರ ಪ್ರೇಮಿಗಾಗಿ ನಾ
ಬೆಂಗಳೂರು, ಬುಧವಾರ, 6 ಜೂನ್ 2007( 15:24 IST )
ಇದೊಂದು ಸದಭಿರುಚಿಯ ಚಿತ್ರ. ಹೆಸರು ಪ್ರೇಮಿಗಾಗಿ ನಾ ಎಂದರು ಜಯಶಂಕರ್. ನಾಯಕಿ ಮೈ ತುಂಬಾ ಬಟ್ಟೆ ಧರಿಸೋ ಚಿತ್ರ. ಬಚ್ಚಮ್ಮಗಳಿಗೆ ತಮ್ಮ ಚಿತ್ರದಲ್ಲಿ ಅವಕಾಶವಿಲ್ಲ ಎಂದೂ ಆರಂಭದಲ್ಲೇ ಪತ್ರಕರ್ತರೊಂದಿಗೆ ಮಾತನಾಡಿದರು.
ತಮ್ಮ ಅಭಿರುಚಿಗೆ ಒಗ್ಗಿಕೊಳ್ಳುವ ಉತ್ತಮ ನಿರ್ದೇಶಕರನ್ನು ಹುಡುಕುತ್ತಿದ್ದೆ. ಶಿವಕುಮಾರ್ ಸಿಕ್ಕರು. ನನ್ನ ಆಸಕ್ತಿ, ಅಭಿರುಚಿಗೆ ಅವರೂ ಪೂಕರವಾಗಿ ಸ್ಪಂದಿಸುತ್ತಿದ್ದಾರೆ ಎನ್ನಲೂ ಮರೆಯಲಿಲ್ಲ.
ಈ ಕಾಲದಲ್ಲಿ ಮೈ ತುಂಬಾ ಬಟ್ಟೆ ಹಾಕಿಕೊಂಡು ಚಿತ್ರ ತೆಗೆದರೆ ಓಡುತ್ತೆಯೇ ಎಂಬ ಪತ್ರಕರ್ತರಿಂದ ತೂರಿ ಬಂದ ಪ್ರಶ್ನೆಗೆ ಕಂಡಿತಾ . ಅದನ್ನು ಪ್ರೂವ್ ಮಾಡಿ ತೋರಿಸ್ತೇನೆ ಎಂದು ಹೇಳಿದರು.
ಅಂದ ಹಾಗೆ ಪ್ರೇಮಿಗಾಗಿ ನಾ ಚಿತ್ರ ಹೊಸಬರದ್ದು. ಇಲ್ಲಿ ನಾಯಕ ನಟನಾಗಿ ಶಂಕರ್ ಹಾಗೂ ನಾಯಕಿಯಾಗಿ ವಂದನಾ ಎಂಟ್ರಿ ತೆಗೆದುಕೊಂಡಿದ್ದಾರೆ. ರಾಜೇಶ್ ರಾಮನಾಥನ್ ಈ ಚಿತ್ರದ ಮುಖಾಂತರ ಸೆಂಚುರಿ ಬಾರಿಸಿದ್ದಾರೆ.
ಚಿತ್ರ ಸಂಗೀತಕ್ಕೆ ಹೆಚ್ಚು ಪ್ರಾಮುಕ್ಯತೆ ನೀಡಿದೆ. ಆದ್ದರಿಂದ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಜಾನಕಿ, ಜೇಸುದಾಸ್ ಅವರ ಕಠಂಸಿರಿಯನ್ನು ಬಳಿಸಿಕೊಳ್ಳಲಾಗಿದೆ ಎಂದರು. ಈ ನೂತನ ಚಿತ್ರ ವಿಭಿನ್ನ ಕಥಾಹಂದರವನ್ನು ಒಳಗೊಂಡಿದೆ ಎಂದರು ಜಯಶಂಕರ್.