ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕೃಷ್ಣ ನಾಗುತ್ತಿದ್ದಾನೆ ಗಣೇಶ
ಸುದ್ದಿ/ಗಾಸಿಪ್
Feedback Print Bookmark and Share
 
YOGARAJ
ND
ಚೆಲ್ಲಾಟವಾಡಿ, ಮುಂಗಾರು ಮಳೆಯಲ್ಲಿ ಜಯಭೇರಿ ಬಾರಿಸಿದ ಗಣೇಶ ಕೃಷ್ಣ ನಾಗುತ್ತಿದ್ದಾನೆ. ಗಣೇಶ್ ಅಭಿನಯದ ಮತ್ತೊಂದು ನೂತನ ಚಿತ್ರ ಕೃಷ್ಣ ಸೆಟ್ಟೇರುತ್ತಿದೆ.

ಪೂಜಾಗಾಂಧಿ ಈ ಚಿತ್ರದಲ್ಲಿ ಪೂಜಾ ಗಾಂಧಿ ನಾಯಕಿಯಾಗಿದ್ದಾರೆ. ಈ ಚಿತ್ರದಲ್ಲಿ ಗಣೇಶ್ ಕೃಷ್ಣನ ಅವತಾರ ತಾಳಲಿದ್ದರೆ, ಇಬ್ಬರು ನಾಯಕಿಯರು, ರಾಧಾ, ರುಕ್ಮಿಣಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ .

ಈ ಚಿತ್ರದ ನಿರ್ದೇಶಕ ಎಂ.ಡಿ.ಶ್ರೀಧರ್ ಹೇಳುವುದು ಹೀಗೆ : ಇದೊಂದು ಶುದ್ಧ ಸಂಸಾರಿಕ ಚಿತ್ರ, ಪ್ರೀತಿ, ಪ್ರೇಮ, ಪ್ರಣಯದೊಂದಿಗೆ ಹಾಸ್ಯವೂ ಚಿತ್ರದಲ್ಲಿ ಪ್ರಧಾನವಾಗಲಿದೆ ಎನ್ನುತ್ತಾ ರೆ. ಈಗಾಗಲೇ ಚಿತ್ರಕ್ಕೆ ಹರಿಕೃಷ್ಣ ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಐದು ಹಾಡುಗಳ ಸಂಗೀತ ಸಂಯೋಜನೆ ಕಾರ್ಯಕ್ರಮ ಆರಂಭಗೊಂಡಿದೆ. ಶಾಂತಿ ಚಿತ್ರ ನಿರ್ಮಿಸಿದ್ದ ರಮೇಶ್ ಯಾದವ್ ಈ ಚಿತ್ರದ ನಿರ್ಮಾಪಕರು.

ಚಿತ್ರದುರ್ಗ, ಬಳ್ಳಾರಿ, ಬೆಂಗಳೂರು, ಚಿಕ್ಕ ಮಗಳೂರು, ಮಡಿಕೇರಿ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ. ಅವಿನಾಶ್ , ಭರತ್ ಭಾಗವತರ್, ಶರಣ್ ಮೊದಲಾದವರು ಪ್ರಮುಖ ಭೂಮಿಕೆಯಲ್ಲಿದ್ದಾರೆ.