ಮಂಗಳೂರಿನಲ್ಲಿ ಯುಗ ಚಿತ್ರೀಕರಣ
ಗುರುವಾರ, 7 ಜೂನ್ 2007( 15:58 IST )
ದುನಿಯಾ ಚಿತ್ರದ ಯಶಸ್ಸಿನ ಉತ್ತುಂಗದಲ್ಲಿರುವ ನಟ ವಿಜಯ್ ಯುಗ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇದೀಗ ಮಂಗಳೂರಿನ ವಿವಿಧ ಭಾಗಗಳಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಮತ್ತು ವಿಜಯ್ ಹೊಡೆದಾಟದ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂದು ಮಂಗಳೂರಿನ ನಮ್ಮ ಪ್ರತಿನಿಧಿ ತಿಳಿಸಿದ್ದಾರೆ.
ಮಂಗಳೂರಿನ ಪ್ರಮುಖ ಬೀದಿಗಳಲ್ಲಿ ಚೇಸ್ ದೃಶ್ಯಗಳನ್ನ ಚಿತ್ರೀಕರಿಸಲಾಗಿದೆ.ಹಾಸನದಲ್ಲೂ ಹಾಡೊಂದರ ಚಿತ್ರೀಕರಣಕ್ಕೆ ಅವಕಾಶ ಕ್ಲಪಿಸಲಾಗಿದೆ ಇನ್ನೊಂದೆಡೆ ಬೆಂಗಳೂರಿನಲ್ಲಿ ಮಾತಿನ ಹಂತದ ಚಿತ್ರೀಕರಣ ನಡೆಯುತ್ತಿದೆ. ಅರ್ಜುನ್ ಈ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ. ರಂಗನಾಥ್ ಸಂಭಾಷಣೆ, ನಾಯಕಿಯಾಗಿ ಕಾವ್ಯ ಮೆರುಗನ್ನು ನೀಡಲಿದ್ದಾಳೆ.