ಕನ್ನಡದ ಕಂದ ಕನ್ನಡ ಚಿತ್ರದ ಮುಖಾಂತರ ಅಭಿನಯಿಸಿ ಜಯಭೇರಿ ಬಾರಿಸಿದ್ದ ವಿನೋದ್ ರಾಜ್ ಸದ್ಯ ಮತ್ತೊಂದು ಚಿತ್ರವನ್ನು ನಿರ್ಮಿಸುವ ಉತ್ಸಾಹದಲ್ಲಿದ್ದಾರೆ.
ಕನ್ನಡದ ಕಂದದಿಂದ ಪ್ರೇಕ್ಷಕರ ಅಭಿಮಾನ, ಕೈ ತುಂಬಾ ಹಣ ಗಳಿಸಿದ್ದ ವಿನೋದ್ ನಿರ್ಮಿಸುತ್ತಿರುವ ಹೊಸ ಚಿತ್ರ ಶುಕ್ರ. ಇದೊಂದು ವಿಭಿನ್ನ ಪ್ರೇಮ ಕಥೆಯ ಚಿತ್ರ ಎಂಬುದು ಒಂದು ಮಾಹಿತಿಯಾದರೆ, ಹೊಸಪೀಳಿಗೆಯ ವೀಕ್ಷಕರನ್ನು ಗುರಿಯಿರಿಸಿಕೊಂಡು ಈ ಚಿತ್ರವನ್ನು ರೂಪಿಸಲಾಗುತ್ತಿದೆ ಎಂಬುದು ಚಿತ್ರ ತಂಡದ ಅಭಿಪ್ರಾಯ.
ಯಾವುದೇ ಸದ್ದುಗದ್ದಲವಿಲ್ಲದೆ ಚಿತ್ರದ ಮುಹೂರ್ತವನ್ನೂ ಮುಗಿಸಿದ್ದಾರೆ. ಅಮ್ಮ ಲೀಲಾವತಿ ಮಗ ವಿನೋದ್ ಸೇರಿಕೊಂಡು ಶುಕ್ರವನ್ನೂ ಗೆಲ್ಲಿಸಲು ಹೊಸ ರೀತಿಯ ಕಥೆಯ ಹಂದರವನ್ನು ಹೆಣೆಯಲಾಗಿದೆ.
1957ರಲ್ಲಿ ಬಾಲಕೃಷ್ಣ ಹಾಗೂ ಲಕ್ಷ್ಮೀ ಅಭಿನಯ ಶುಕ್ರದೆಸೆ ಚಿತ್ರ ತೆರೆಕಂಡಿತ್ತು. ಆದರೆ ಈ ಚಿತ್ರಕ್ಕೂ ಆ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ವಿನೋದ್ ರಾಜ್ ಅನಿಸಿಕೆ.
ಈ ಚಿತ್ರವನ್ನು ಜಿ.ಕೆ.ಮುದ್ದುರಾಜ್ ನಿರ್ಮಿಸುತ್ತಿದ್ದಾರೆ. ಶ್ರೀನಿವಾಸ ಕೌಶಿಕ್ ಸಂಭಾಷಣೆ ಬರೆದಿದ್ದಾರೆ. ಮಲ್ಲಿಕಾರ್ಜುನ್ ಅವರ ಕ್ಯಾಮರಾ ಕೈಚಳಕ ಈ ಚಿತ್ರಕ್ಕಿದೆ. ಪ್ರಿಯಾ ದೀಕ್ಷಿತ್ ಈ ಚಿತ್ರ ನಾಯಕಿಯಾಗಿದ್ದಾರೆ.