ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಓರಾಟ'ದಲ್ಲಿ ಮುಮಿಯತ್‌ ಆಟ
ಸುದ್ದಿ/ಗಾಸಿಪ್
Feedback Print Bookmark and Share
 
ಬಾಲಿವುಡ್, ದಕ್ಷಿಣ ಭಾರತದ ವಿವಿಧ ಭಾಷಾ ಚಿತ್ರಗಳಲ್ಲಿ ಐಟಂ ಸಾಂಗ್ಸ್ ಮತ್ತಿತರ ದೃಶ್ಯಗಳಲ್ಲಿ ಬಿಸಿಬಿಸಿಯಾಗಿ ಕಾಣಿಸಿಕೊಂಡಿರುವ ಮುಮಿಯತ್‌ ಖಾನ್ ಇದೀಗ ಕನ್ನಡದ ಸ್ಯಾಂಡಲ್‌ವುಡ್‌ ನಲ್ಲಿ ಕುಣಿಯಲಿದ್ದಾಳೆ.

ಕನ್ನಡ ಚಿತ್ರ 'ಓರಾಟ' ಆಕೆಯ ಮೈಮಾಟ ಪ್ರದರ್ಶನಕ್ಕೆ ಸಿದ್ಧವಾಗಿದೆ. ಈಗಾಗಲೇ ಬಾಲಿವುಡ್‌ ಚಿತ್ರ ಮುನ್ನಾ ಭಾಯ್ ಎಂಬಿಬಿಎಸ್ ನಲ್ಲಿ ಈಕೆಯ ಐಟಂ ದೃಶ್ಯಗಳು ಜನಜನಿತ. ಅದೇ ರೀತಿ ತಮಿಳಿನ ಪೊಕಿರಿ, ತೆಲುಗಿನ ಕೆಲವು ಚಿತ್ರಗಳಲ್ಲೂ ಈಕೆಯ ನರ್ತನ ಜನಮನಗೆದ್ದಿದೆ.

ಓರಾಟದ ಚಿತ್ರೀಕರಣ ಆರಂಭವಾಗಿದೆ ಮನೋಹರ್‌ ನಿರ್ಮಾಣದ ಚಿತ್ರವನ್ನು ಶ್ರೀನಿವಾಸ್‌ ನಿರ್ದೇಶಿಸುತ್ತಿದ್ದಾರೆ. ಮುಮಿಯತ್‌ ನರ್ತಿಸುವ ಹಾಡುಗಳನ್ನು ಅಭಿಮಾನ್‌ ಸ್ಟುಡಿಯೋದಲ್ಲಿ ಚತ್ರಿಸಲಾಗುತ್ತಿದೆ.

ಪ್ರಸ್ತುತ ಓರಾಟ ಚಿತ್ರದಲ್ಲಿ ಹೊಸ ಮುಖಗಳಾದ ಪ್ರಶಾಂತ್ ಹಾಗೂ ಸೌಮ್ಯ ಇವರನ್ನು ಪರಿಚಯಿಸಲಾಗುತ್ತಿದೆ. ಚಿತ್ರಕ್ಕಾಗಿ ಹಾಡುಗಳ ದೃಶ್ಯೀಕರಣ ಭರದಿಂದ ಸಾಗುತ್ತದೆ.