ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮನ್ಮಥ ಬಿಡುಗಡೆಗೆ ಸಿದ್ಧ
ಸುದ್ದಿ/ಗಾಸಿಪ್
Feedback Print Bookmark and Share
 
Jaggesh
PTI
ನವರಸನಾಯಕ ಜಗ್ಗೇಶ್ ಅಭಿನಯದ ಮನ್ಮಥ ಬಿಡುಗಡೆಗೆ ಸಿದ್ಧಗೊಂಡಿದೆ.

ಮಲಯಾಳಂ, ತಮಿಳು ಚಿತ್ರರಂಗದಲ್ಲಿ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಈಗ ಇದನ್ನು ಕನ್ನಡಕ್ಕೆ ತಂದವರು ರೇಮಂಡ್ ಕೋಡ್ರಾಸ್. ಜಗ್ಗೇಶ್ ಈ ಚಿತ್ರದಲ್ಲಿ ವಿಭಿನ್ನವಾಗಿ ಅಭಿನಯಿಸಿದ್ದಾರಂತೆ.

ಹೊಸ ಚಿತ್ರದಲ್ಲಿ ನನಗೆ ಹೊಸ ಇಮೇಜ್ ಇದೆ. ಈವರೆಗೂ ಇಂತಹ ಚಿತ್ರದಲ್ಲಿ ಅಭಿನಯಿಸಿಯೇ ಇಲ್ಲ ಅನ್ನುತ್ತಾರೆ ಜಗ್ಗೇಶ್.

ಅಂದ ಹಾಗೆ ಈ ಚಿತ್ರದಲ್ಲಿ ಪೂಜಾಗಾಂಧಿ, ಗುರ್ಲಿನ್ ಛೋಪ್ರಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರೀಕರಣ ಮುಗಿದಿದೆ. ಡಿಟಿಎಸ್ ಕಾರ್ಯವೂ ಪೂರ್ಣಗೊಂಡಿದೆ. ರಮೇಶ್ ಬಾಬು ಚಿತ್ರಕ್ಕೆ ಛಾಯಾಗ್ರಹಣ ನೀಡಿದ್ದಾರೆ.

ವಿಜಯ ಭಾರತಿ ಸಂಗೀತ ಸಂಯೋಜಿಸಿದ್ದಾರೆ. ಜಗ್ಗೇಶ್ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಕೋಮಲ್, ಶ್ರೀನಿವಾಸಮೂರ್ತಿ, ಆಶಾಲತಾ ಚಿತ್ರದಲ್ಲಿ ಅಭಿನಯಿಸಿದ್ದಾರೆ.