ಗಣೇಶ್ ಅಭಿಮಾನಿಗಳ ಸಂಘ
ಬೆಂಗಳೂರು, ಮಂಗಳವಾರ, 12 ಜೂನ್ 2007( 15:23 IST )
ಮುಂಗಾರು ಮಳೆಯ ಹಿಟ್ ಹೀರೋ ಗಣೇಶ್ ಗೆ ಅಭಿಮಾನಿ ಸಂಘ ಆರಂಭಗೊಳ್ಳುತ್ತಿದೆ.ಗೋಲ್ಡನ್ ಸ್ಟಾರ್ ಬಿರುದಾಂಕಿತ ಗಣೇಶ್ ಅದೃಷ್ಟ ಕುದುರಿದೆ.
ಕನ್ನಡಕ್ಕೊಬ್ಬ ಹೊಸ ಸ್ಟಾರ್ ಎಂಬ ಅಭಿಮಾನಕ್ಕೆ ಪಾತ್ರರಾಗಿದ್ದಾರೆ. ಗಣೇಶ್ ಅಭಿನಯದ ಚಿತ್ರಗಳು ಚಿತ್ರಮಂದಿರದಲ್ಲಿ ಭರ್ಜರಿಯಾಗಿ ಓಡುತ್ತಿದೆ. ಪ್ರೇಮಿಗಳ ಕಾಟ ಹೆಚ್ಚಾಗಿದೆ. ಮ ಉದ್ದುಮುದ್ದಾದ ಹುಡುಗನ ಈ ಅಭಿಮಾನದ ನಟನ ಬಗ್ಗೆ ಎಲ್ಲೆಡೆ ಪ್ರಶಂಸೆಯ ಮಾತು ಕೇಳಿ ಬರುತ್ತಿದೆ.
ಸದ್ಯ ಈ ನೂತನ ಸಂಘ ಹೆಸರು ಅಖಿಲ ಕರ್ನಾಟಕ ಗಣೇಶ್ ಅಭಿಮಾನಿಗಳ ಸಂಘ. ಅಂದ ಹಾಗೆ ಇದು ಕೇವಲ ಹೆಸರಿಗಾಗಿ ಇರುವ ಸಂಘವಲ್ಲ. ಈ ಅಭಿಮಾನಿ ಸಂಘದ ಮೂಲಕ ಬಡವರಿಗೆ, ಅಸಹಾಯಕರಿಗೆ ಸಂಘದ ಸದಸ್ಯರು ಕೆಲಸ ಮಾಡಬೇಕು ಎಂಬುದು ನಟ ಗಣೇಶ್ ಕಳಕಳಿ.
ಆರಂಭದಲ್ಲಿ ಈ ಷರತ್ತು ವಿಧಿಸಿಯೇ ಸಂಘದ ಸ್ಥಾಪನೆಗೆ ಅವಕಾಶ ನೀಡಿದ್ದೇನೆ ಎನ್ನುತ್ತಾರೆ. ಈವರೆಗೆ ದರ್ಶನ್, ಶಿವರಾಜ್ ಕುಮಾರ್, ಪುನೀತ್ ಹೀಗೆ ಎಲ್ಲಾ ನಟರಿಗೂ ತಮ್ಮದೇ ಆದ ಅಭಿಮಾನಿ ಸಂಘಗಳಿವೆ. ಈಗ ಖುಷಿಯ ಸರದಿ ಗಣೇಶ್ ಅಭಿಮಾನಿಗಳದ್ದು.