ಮುಂದೂಡಿದ ಸುದೀಪ್ ಚಿತ್ರ ಬಿಡುಗಡೆ
ಬೆಂಗಳೂರು, ಮಂಗಳವಾರ, 12 ಜೂನ್ 2007( 15:25 IST )
ಸುದೀಪ್ ನಿರ್ದೇಶನದ ನಂ 73 ಶಾಂತಿ ನಿವಾಸ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಎರಡು ವಾರಗಳ ಹಿಂದೆಯೇ ಚಿತ್ರದ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ಸಮಸ್ಯೆಯಿಂದಾಗಿ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ.
ಚಿತ್ರದಲ್ಲಿ ಸುದೀಪ್ ಪ್ರಾಣಿ ಪಕ್ಷಿಗಳನ್ನು ಬಳಸಿದ್ದಾರೆ ಎಂಬ ಕಾರಣಕ್ಕೆ ಈ ಡಿಲೇ ಎಂಬುದು ಒಂದು ವಾದ. ಆದರೆ ಪ್ರಾಣಿ ಪಕ್ಷಿಗಳನ್ನು ಚಿತ್ರದಲ್ಲಿ ಬಿಂಬಿಸಿದರೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕು ಮತ್ತು ಪ್ರಾಣಿಗಳಿಗೆ ನೋವಾಗಬಾರದು ಎಂಬುದು ನಿಯಮ.
ಕಿಚ್ಚನ ಶಾಂತಿ ನಿವಾಸದಲ್ಲಿ ಪಕ್ಷಿಗಳಿಗೆ ಹಲ್ಲೆಯನ್ನು ಮಾಡಲಾಗಿದೆ ಎಂಬುದು ಸೆನ್ಸಾರ್ ವಾದ. ಇದರಿಂದಾಗಿ ಚಿತ್ರ ಬಿಡುಗಡೆಗೆ ನಿಧಾನವಾಗಿದೆ. ಈ ಕಾರಣಕ್ಕೇ ದೆಹಲಿ, ಬೆಂಗಳೂರು ಎಂದು ಓಡಾಡಿ ಸುದೀಪ್ ಸುಸ್ತಾಗಿದ್ದಾರಂತೆ,. ಆದರೆ ಇನ್ನೂ ಸೆನ್ಸರ್ ಮಂಡಳಿಯಿಂದ ಪತ್ರ ಸಿಕ್ಕಿಲ್ಲ. ಚಿತ್ರ ಬಿಡುಗಡೆಯಾವಾಗ ನಡೆಯುತ್ತೆ ಎಂಬುದನ್ನು ಕಾದು ನೋಡಬೇಕಿದೆ.