ದಾಮಿನಿ ಪ್ರಕರಣ ಸುಖಾಂತ್ಯ
ಬೆಂಗಳೂರು, ಗುರುವಾರ, 14 ಜೂನ್ 2007( 17:07 IST )
ಸ್ಯಾಂಡಲ್‌ವುಡ್‌ನ ಕನ್ನಡ ನಟಿ ದಾಮಿನಿಯ ತೊಂದರೆ ಈಗ ನಿವಾರಣೆಯಾಗಿದೆ.
ನಿರ್ಮಾಪಕ ನಿರ್ದೇಶಕರು ಹಣ ನೀಡುತ್ತಿಲ್ಲ, ಕಿರುಕುಳ ನೀಡತ್ತಿದ್ದಾರೆ. ಸಮಸ್ಯೆ ಬಗೆಹರಿಸುವ ವರೆಗೆ ಅವರ ಒಪ್ಪಿದ ಚಿತ್ರದಲ್ಲಿ ನಟಿಸೋಲ್ಲ- ಎಂದು ಆಕ್ರೋಶಿಸುತ್ತಿದ್ದ ಧಾಮಿನಿ ಈಗ ಕೂಲ್ ಆಗಿ ಕ್ಯಾಮೆರಾ ಮುಂದೆ ನಿಂತಿದ್ದಾರೆ.
'ಸ್ವತಂತ್ರ ಪಾಳ್ಯ.' ಸಿನಿಮದಲ್ಲಿ ತೊಡಗಿಸಿಕೊಂಡಿರುವ ದಾಮಿನಿಗೆ, ಈ ಚಿತ್ರದ ನಿರ್ದೇಶಕ ವೆಂಕಟೇಶ್ ಹಾಗೂ ನಿರ್ಮಾಪಕರು ಕಿರುಕುಳ ನೀಡುತ್ತಾರೆ, ಸುಮಾರು 1 ಲಕ್ಷ ರೂ. ಸಂಭಾವನೆ ನೀಡಿಲ್ಲ ಎನ್ನುವುದು ಆಕೆಯ ದೂರು.
ಆದರೆ, ಈ ದೂರು ಈಗ ನಿವಾರಣೆಯಾಗಿದೆ.
ರಾಜ್ಯ ಫಿಲ್ಮ್ ಛೇಂಬರ್ ಸಮ್ಮುಖದಲ್ಲಿ ನಡೆದ ಮಾತುಕತೆಯಲ್ಲಿ ಸಂಧಾನ ಯಶಸ್ವಿಯಾಗಿದೆ. ಆಕೆಗೆ 1 ಲಕ್ಷ ರೂ. ನೀಡಲು ನಿರ್ದೇಶಕ ನಿರ್ಮಾಪಕರಿಬ್ಬರೂ ಒಪ್ಪಿಕೊಂಡು, ಅದನ್ನು ಹಸ್ತಾಂತರಿಸಿಯೂ ಆಗಿದೆ.
ಇದೀಗ ಪ್ರಕರಣ ಇತ್ಯರ್ಥವಾಗಿದೆ. ದಾಮಿನಿ ಮತ್ತೆ ಅದೇ ಸಿನಿಮಾ ಮುಗಿಸಿಕೊಡಲು ಒಪ್ಪಿದ್ದಾರೆ. ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ.