."ದುನಿಯಾ" ಶತದಿನೋತ್ಸವ ಸಂಭ್ರಮ
ಬೆಂಗಳೂರು, ಶುಕ್ರವಾರ, 15 ಜೂನ್ 2007( 17:14 IST )
ದುನಿಯಾ ಸಿನಿಮಾದ ಶತದಿನೋತ್ಸವ ಸಮಾರಂಭ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸೂರಿ ದುನಿಯಾ ಗ್ರೇಟ್, ಅದ್ಬತ ದುನಿಯಾ, ಸುಂದರವಾದ ದುನಿಯಾ ನಾವು ಯಶಸ್ವಿನಲ್ಲಿ ಸೇರಿದ್ದೇವೆ, ಈ ರೀತಿಯ ಸಿನಿಮಾದಲ್ಲಿ ಮಾಡಬೇಕೆಂಬ ಆಸೆ ಎಂದು ಖ್ಯಾತ ನಟ ಪುನೀತ್ ರಾಜಕುಮಾರ್ ತಮ್ಮ ಮೆಚ್ಚಿಗೆಯನ್ನು ಬಿಚ್ಚಿಟ್ಟರು.
ದುನಿಯಾ ನೋಡಿದ ಮೇಲೆ ನಾನು ಸೂರಿ ಅಭಿಮಾನಿಯಾದೆ. ರೌಡಿಸಂ ವಿಷಯ ಇಟ್ಟುಕೊಂಡು ಯಶಸ್ಸು ಗಳಿಸುವುದು ಕಷ್ಟ ಎಂದು ಶಿವರಾಜ್ ಕುಮಾರ್ ಪ್ರಮಾಣಿಕವಾಗಿ ನುಡಿದರು.
ದುನಿಯಾದ ವೇಗವಾದ ನಿರೂಪಣೆ ನನಗೆ ಇಷ್ಟವಾದ ಅಂಶವಾಗಿದ್ದು ನಾನು ವಿಜಯ್ ಕೆಲವೊಂದು ವಿಷಯಗಳಲ್ಲಿ ಒಂದೇ ರೀತಿ ,ಇಬ್ಬರ ಬಣ್ಣವು ಕಪ್ಪು, ಕಷ್ಟಪಟ್ಟು ಮೇಲೆ ಬಂದಿದ್ದೇವೆ ಎಂದು ಖ್ಯಾತ ನಟ ಜಗ್ಗೇಶ್ ನುಡಿದರು.ಕಾರ್ಯಕ್ರಮದಲ್ಲಿ ಅನೇಕ ನೃತ್ಯ ಕಾರ್ಯಕ್ರಮಗಳು ನೆರೆದಿದ್ದ ಫ್ರೇಕ್ಷಕರನ್ನು ಮನಸಾರೆ ರಂಜಿಸಿದವು.
ಈ ಸಂದರ್ಭದಲ್ಲಿ ಶಾಸಕ ಡಿ.ಕೆ ಶಿವಕುಮಾರ್ ಮಾತನಾಡಿದರು.ಮುಂಗಾರು ಮಳೆ ತಂಡಕ್ಕೆ ದುನಿಯಾ ತಂಡ ನೆನಪಿನ ಫಲಕಗಳನ್ನು ನೀಡಿದ್ದು ವಿಶೇಷವಾಗಿತ್ತು.