"ಹುಡುಗಾಟ"ದಲ್ಲಿ ಮಲೆಯಾಳಿ ಪ್ರತಿಭೆ
ಬೆಂಗಳೂರು, ಶುಕ್ರವಾರ, 15 ಜೂನ್ 2007( 17:15 IST )
ಹುಡುಗಾಟ ಚಿತ್ರದಲ್ಲಿ ಗೀತೆಗಳಿಗೆ ಗುನುಗುವಂತ ಟ್ಯೂನ್ ಹೊಂದಿಸಿದ ಸಂಗೀತ ನಿರ್ದೆಶಕ ಜೆಸ್ಸಿ ಗಿಫ್ಟ್ ಮಾಡಿದ ಕೆಲಸ ತುಂಬಾ ತೃಪ್ತಿ ಕೊಟ್ಟಿದೆ ಎಂದು ಚಿತ್ರದ ನಿರ್ಮಾಪಕರು ಹೇಳಿದ್ದಾರೆ.
ಜೆಸ್ಸಿ ಮೂಲತ: ಮಲೆಯಾಳಿ ಪ್ರತಿಭೆ. ಎಂಟು ಮಲೆಯಾಳಂ, ಮೂರು ತಮಿಳು ಹಾಗೂ ಒಂದು ತೆಲಗು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.ಹುಡುಗಾಟದ ಮೂಲಕ ದಕ್ಷಿಣದ ಎಲ್ಲ ಪ್ರಮುಖ ಭಾಷೆಗಳ ಸಿನಿಮಾಗಳಲ್ಲೂ ಜೆಸ್ಸಿ ಕೆಲಸ ಮಾಡಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಹಿಂದಿಯಲ್ಲಿ ಕೆಲವು ಅಲ್ಬಂಗಳನ್ನು ತಂದಿರುವ ಜೆಸ್ಸಿ ಗಾಯಕರಾಗಿಯೂ ಪ್ರಸಿದ್ದರು. ಹುಡುಗಾಟದ ಮಂದಾಕಿನಿಯೇ ಹಾಡಿನ ಮಾದಕ ಕಂಠ ಅವರದೇ ಕಂಠ.ಕಲಾಸಿಪಾಳ್ಯದಲ್ಲಿ ಅವರು ಹಾಡಿದ ಸುಂಟರಗಾಳಿ ಹಾಡು ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿದೆ ಎಂದು ಅವರ ಪ್ರತಿಭೆಯನ್ನು ನಿರ್ಮಾಪಕರು ಹೊಗಳಿದ್ದಾರೆ.
ಕಂಠದಾನ ಕಲಾವಿದರಾಗಿಯೂ ಜೆಸ್ಸಿ ಕೆಲಸ ಮಾಡಿದ್ದಾರೆ. ಚಿರಂಜೀವಿ, ವಿಕ್ರಮ್ ವಿಜಯ್ ಜ್ಯೂನಿಯರ್ ಎನ್‌ಟಿಆರ್, ಸಿದ್ದಾರ್ಥ, ರವಿತೇಜ್ ಸೇರಿದಂತೆ ಅನೇಕ ನಾಯಕರಿಗೆ ಧ್ವನಿಯನ್ನು ನೀಡಿದ್ದಾರೆ ಎಂದು ವಿವರಿಸಿದ್ದಾರೆ.