ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕನ್ನಡ ಚಿತ್ರಕ್ಕೆ ದುಬೈ ಸುಂದರಿ
ಸುದ್ದಿ/ಗಾಸಿಪ್
Feedback Print Bookmark and Share
 
ಕನ್ನಡ ಬರೋಲ್ಲ. ಇಂಗ್ಲಿಷ್ ಬರುತ್ತೆ. ಹಿಂದಿಗೂ ನಾಲಿಗೆ ತಿರುಗುತ್ತೆ. ಕಲಿತಿರೋದು ಒಳಾಂಗಣ ವಿನ್ಯಾಸ್. ಮಾಡ್ತಿರೋದು ಸಿನಿಮಾ. ನೃತ್ಯ ಗೊತ್ತು. ನಟನೆಯ ಕಲಿಕೆ ಚಾಲ್ತಿಯಲ್ಲಿದೆ.

ಖಾಯಾಂ ವಿಳಾಸ ದುಬೈ, ಸಿನಿಮಾಕ್ಕೋಸ್ಕರ್ ಮುಂಬೈನಲ್ಲೊಂದು ಸಂಪರ್ಕ ವಿಳಾಸ. ಆರಂಭಕ್ಕೆ ಕನ್ನಡ ಸಿನಿಮಾ ಸಹವಾಸ. ಇದಿಷ್ಟು ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದ ನಾಯಕಿ ನಮ್ರತಾರ ವೃತ್ತಾಂತ.

ಚಿತ್ರದಲ್ಲಿ ಇಬ್ಬರು ನಾಯಕಿಯರು. ಒಬ್ಬಾಕೆ ರೋಹಿಣಿ. ಆಕೆಯಷ್ಟೇ ಅವಕಾಶ ನಮ್ರತಾಗೂ ಇದೆಯಂತೆ. ಇಬ್ಬರು ಚೆಲುವೆಯರಲ್ಲಿ ಪ್ರೇಮ್ ಯಾರ ಪಾಲಿಗೆ ಅನ್ನೋದು ಗುಟ್ಟು. ಚಿತ್ರದಲ್ಲಿ ನಮ್ರತಾ ಪಾತ್ರವೇನು ಅನ್ನೋದು ಗುಟ್ಟು .

ಆಕೆ ಹೇಳೊ ಪ್ರಕಾರ ಅದು ದೇವರಿಗೆ ಗೊತ್ತು. ಮೌನ ಅಂದ್ರೆ ಇಷ್ಟ ಅನ್ನುವ ಆ ಕಾರಣದಿಂದಾಗಿಯೇ ನಗುತ್ತಾ ಇರುವ ನಮ್ರತಾಗಿದು ಮೊದಲ ಸಿನಿಮಾ. ಪ್ರತಿಭಾವಂತೆ ಅನ್ನೋದು ನಿರ್ಮಾಪಕ ನಿರ್ದೆಶಕರ ಕಾಮೆಂಟು.

ಪ್ರೇಮ್ ಪ್ರತಿಭೆಯ ಬಗ್ಗೆ ನಮ್ರತಾಗೆ ವಿಪರೀತ ಗೌರವ. ಅವರಿಂದ ತುಂಬಾ ಕಲಿತಿದ್ದೇನೆ. ನಾನು ನಟಿಸುವುಂತೆ ಅವರು ಮಾಡುತ್ತಿದ್ದಾರೆ ಎಂದು ನಮ್ರತಾ ನಕ್ಕರು. ಪ್ರೇಮ್ ಕೂಡಾ ನಕ್ಕರು.