ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » " ಪ್ರೀತಿ ಏಕೆ ಭೂಮಿ ಮೇಲಿದೆ " ತೆರೆಗೆ ಸಿದ್ದತೆ
ಸುದ್ದಿ/ಗಾಸಿಪ್
Feedback Print Bookmark and Share
 
PREM
IFM
ನಿರ್ದೆಶಕ ಪ್ರೇಮ್ ಮತ್ತು ನಿರ್ಮಾಪಕ ಅಶ್ವಿನಿ ರಾಮ್‌ಪ್ರಸಾದ್ ಅವರ ನಿರ್ಮಾಣದ "ಪ್ರೀತಿ ಏಕೆ ಭೂಮಿ ಮೇಲಿದೆ" ಚಿತ್ರ ಅಗಸ್ಟ್ 24ಕ್ಕೆ ತೆರೆಗೆಬರಲು ಸಿದ್ದತೆ ನಡೆಸಿದೆ ಎಂದು ನಿರ್ಮಾಪಕ ಅಶ್ವಿನಿ ರಾಮ್‌ಪ್ರಸಾದ್ ಹೇಳಿದ್ದಾರೆ.

ಚಿತ್ರೀಕರಣದಲ್ಲಿ ಸ್ವಲ್ಪ ವಿಳಂಬವಾಗಿರುವುದು ನಿಜ. ಆದರೆ ನಾವು ಅಂದುಕೊಂಡಂತೆ ಅಗಸ್ಟ್ 24ರ ವರ ಮಹಾಲಕ್ಷ್ಮಿ ಹಬ್ಬದಂದು ಸಿನಿಮಾ ಬಿಡುಗಡೆಯಾಗುತ್ತದೆ.ಜೂನ್ ಅಂತ್ಯಕ್ಕೆ ಕುಂಬಳಕಾಯಿ ಒಡೆಯೋದು ಗ್ಯಾರಂಟಿ. ಪೊಲ್ಲಾಚಿ, ಕುಶಾಲನಗರಗಳಲ್ಲಿ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ಬಂದಿದ್ದೇವೆ.

ಬೆಂಗಳೂರು ಹಬ್ಬದ ಹಾಡೊಂದು ಬಾಕಿಯಿದೆ ಎಂದು ರಾಮ್ ಹೇಳಿದ್ದಾರೆ.ಈ ಮೊದಲು ಪೊಲ್ಲಾಚಿಯಲ್ಲಿ ಸ್ಥಳಿಯರ ವಿರೋಧದಿಂದ ಅರ್ಧಕ್ಕೆ ನಿಲ್ಲಿಸಿದ್ದ ಗೀತೆಯೊಂದರ ಚಿತ್ರೀಕರಣವನ್ನು ಮತ್ತೆ ಅದೇ ಸ್ಥಳದಲ್ಲಿಯೇ ಪೂರ್ಣಗೊಳಿಸಿದ್ದೇವೆ.

ಪೊಲೀಸ್ ರಕ್ಷಣೆಯಲ್ಲಿ ಚಿತ್ರೀಕರಣ ನಡೆಸಿದ್ದು, ಜನರಿಗೆ ಅನುಮಾನ ಬರದಿರಲೆಂದು ಶೂಟಿಂಗ್‌ಗೆ ಬೇಕಾದ ಎಲ್ಲ ಸಲಕರಣೆಗಳನ್ನು ತಮಿಳುನಾಡಿನಿಂದಲೇ ತರಿಸಿದ್ದೆವು. ತಮಿಳಿನಲ್ಲಿಯೇ ಮಾತನಾಡುತ್ತಿದ್ದೆವು. ನೋಡುವ ಜನರಿಗೆ ತಮಿಳು ಚಿತ್ರದ ಶೂಟಿಂಗ್ ನಡೆಯುತ್ತಿದೆ ಎನ್ನಿಸುವಂತಹ ಸನ್ನಿವೇಶ ಸೃಷ್ಟಿಸಿದೆವು ಎಂದು ಬಣ್ಣಿಸಿದರು.