ಟಿ ಎನ್ ರಮೇಶ ನಿರ್ಮಿಸುತ್ತಿರುವ "ಸತ್ಯಇನ್ ಲವ್"ತಾಂತ್ರಿಕತೆ ಹಾಗೂ ಕಥೆಯಲ್ಲಿ ವಿಭಿನ್ನವಾಗಿರುವ ಚಿತ್ರ. ಈ ಚಿತ್ರದ ವೆಚ್ಚವೂ ಅಪಾರ.
ಚಿತ್ರದ ಮೂರನೇ ಹಂತದ ಚಿತ್ರೀಕರಣ ಇದೇ ತಿಂಗಳ 14 ರಿಂದ ಆರಂಭವಾಗಿದೆ ಚಿತ್ರದಲ್ಲಿ ಶಿವರಾಜಕುಮಾರ್ ಹೊಸ ರೀತಿಯ ಸಾಹಸಮಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.ರಾಘವ ಲೋಕಿ ಅವರ ನಿರ್ದೆಶನದ ಈ ಚಿತ್ರಕ್ಕೆ ಪೀಟರ್ ಅವರ ಸಾಹಸವಿದೆ.
ಹದಿನಾರು ದಿನಗಳ ಕಾಲ ಸತತ ಚಿತ್ರೀಕರಣ ನಡೆಯಲಿದೆ ಎಂದು ಲೋಕಿ ಹೇಳುತ್ತಿದ್ದು, ಈ ಹಂತದಲ್ಲಿ ಕೆಲವು ದಿನ ಹೈದ್ರಾಬಾದ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಮಳುವಳ್ಳಿ ಸಾಯಿಕೃಷ್ಣ ಅವರ ಸಂಭಾಷಣೆ ಈ ಚಿತ್ರಕ್ಕಿದ್ದು, ಗುರುಕಿರಣ ಅವರ ಸಂಗೀತವಿದೆ.
ವಿ ಮನೋಹರ್ ,ಕವಿರಾಜ, ಹೃದಯ ಶಿವ ಅವರು ಗೀತೆಗೆ ಸಾಹಿತ್ಯ ರಚಿಸಿದ್ದಾರೆ. ನೃತ್ಯ ಸಂಯೋಜನೆ ಪ್ರದೇಪ್ ಹಾಗೂ ತ್ರಿಭವನರದ್ದು, ಸುನೀಲ್ ತಾಳ್ಯ ಅವರ ಸಹನಿರ್ದೆಶನವಿದೆ. ತಾರಾಣದಲ್ಲಿ ಜೆನಿಲಿಯಾ, ವಿನಯಾ ಪ್ರಸಾದ್ ಶ್ರೀನಾಥ, ಜೆಪಿ.ರೆಡ್ಡಿ, ಸಂಗೀತಾ, ಅಜೇಯ್, ಸುಬ್ಬರಾಜು ಪವಿತ್ರಾ ಲೋಕೇಶ್ ಶರಣ ಪ್ರಮುಖ ತಾರಾಗಣದಲ್ಲಿದ್ದಾರೆ.