ಚಿತ್ರಕ್ಕಾಗಿ ಡಾ. ವಿಷ್ಣುವರ್ಧನ್, ಜಯಪ್ರದಾ, ದರ್ಶನ್, ಜೆನ್ನಿಫರ್, ಶರ್ಮಿಳಾ, ವರುಣ, ಶಿವರಾಂ, ದೊಡ್ಡಣ್ಣ ಮುಂತಾದವರು ಭಾಗವಹಿಸಿದ ಹಲವಾರು ಸನ್ನಿವೇಶಗಳನ್ನು ಲಲಿತ ಮಹಲ್, ವಿಜಯನಗರ, ಯಾದವಗಿರಿ,ಒಂಟಿ ಕೊಪ್ಪಲ್ ಹಾಗೂ ಮೈಸೂರಿನ ಸುತ್ತಮುತ್ತ ಅಜಯ ವಿನ್ಸೆಂಟ್ ಛಾಯಾಗ್ರಹಣದಲ್ಲಿ ನಿರ್ದೆಶಕಿ ವಿಜಯಲಕ್ಷ್ಮಿಸಿಂಗ್ ಚಿತ್ರಿಸಿಕೊಂಡರು.
ಚಿತ್ರದ ಚಿತ್ರೀಕರಣದ ಬಗ್ಗೆ, ಇಡೀ ಚಿತ್ರ ತಂಡವೇ ನಿರ್ದೆಶಕಿ ವಿಜಯಲಕ್ಷ್ಮಿಸಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಡಾ. ವಿಷ್ಣುವರ್ಧನರಂತೂ ಹಲವಾರು ಚಿತ್ರಗಳನ್ನು ನಿರ್ದೆಶಿಸಿದ ಒಬ್ಬ ಅನುಭವವುಳ್ಳ ನಿರ್ದೆಶಕಿಯಂತೆ ಕೆಲಸ ಮಾಡಿರುವುದು ಯೋಜನೆಯಂತೆ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿರುವುದು ತಂಡದ ಪ್ರತಿಯೊಬ್ಬರು ವಿಜಯಲಕ್ಷ್ಮಿಸಿಂಗ್ ಕಾರ್ಯವೈಖರಿಯನ್ನು ಮೆಚ್ಚಲೇಬೇಕು ಎಂದು ಹೇಳಿದರು.
ಚಿತ್ರಕ್ಕೆ ಮಧು ಸಂಬಾಷಣೆ, ಮನೋಮೂರ್ತಿ ಸಂಗೀತ, ಜಯಂತ ಕಾಯ್ಕಣಿ ಸಾಹಿತ್ಯ, ಅಜಯ್ ವಿನ್ಸೆಂಟ್ ಛಾಯಾಗ್ರಹಣ, ,ಚಿನ್ನಿಪ್ರಕಾಶ ನೃತ್ಯ, ಕೆಂಪರಾಜ್ ಸಂಕಲನ, ಕಿಟ್ಟಿ ರಂಗಮಂಚ, ನಿರ್ದೆಶನ ಸಹಕಾರ ಇನ್ನಿತರರು ತಾರಗಣದಲ್ಲಿದ್ದಾರೆ.