"ಬ್ಲಾಕ್"ಗೆ ಐದು ಹಾಡುಗಳು
ಬೆಂಗಳೂರು, ಭಾನುವಾರ, 17 ಜೂನ್ 2007( 12:49 IST )
ಸ್ಯಾಂಡಲ್‌ವುಡ್ ಬ್ರೈನ್ ಪ್ರೋಡಕ್ಷನ್ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಬ್ಲಾಕ್ ಚಿತ್ರಕ್ಕೆ ಕಳೆದ ವಾರ ಬಾಲಾಜಿ ಡಿಜಿ-ಸ್ಟುಡೀಯೋದಲ್ಲಿ ಹಾಡುಗಳ ಧ್ವನಿ ಮದ್ರಣ ಕಾರ್ಯ ನಡೆಯುತು.
ವಾಣಿ ಸರಸ್ವತಿ ನಾಯ್ಡು ರಚಿಸಿರುವ ಲಡಬಡ ಹುಡುಗ ನೀನು... ಗಡಿಬಡಿ ಆಗಬೇಡ, ಹುಡುಗಿಯ ಮಾರಿ ನೋಡಿ ಹಾಗೂ ನವೀನ ಟೀನೆಜ್ ಹುಡುಗರ ಲೋಕ, ತೇಲಾಡುವ ಬೀಯರಿನ ಕಿಕ್ಕ್, ಎಂಬ ಗೀತೆಯೊಂದಿಗೆ ಒಟ್ಟು ಐದು ಹಾಡುಗಳನ್ನು ,ಸಿ. ಆರ್ ಬಾಬ್ಬಿ ಅವರ ಸಂಗೀತ ನಿರ್ದೆಶನದಲ್ಲಿ ಧ್ವನಿ ಮದ್ರಿಸಿಕೊಳ್ಳಲಾಯಿತು.
ಇದೇ ತಿಂಗಳ 25ರಿಂದ ಚಿತ್ರೀಕರಣ ಆರಂಭವಾಗಲಿರುವ ಈ ಚಿತ್ರವನ್ನು ಮಹೇಂದ್ರ ಅವರು ನಿರ್ದೆಶಿಸುತ್ತಿದ್ದಾರೆ. ಮನೋಹರ್ ಛಾಯಾಗ್ರಹಣ, ಸಿ. ಆರ್ ಬಾಬ್ಬಿ ಸಂಗೀತ ಸುರೇಶ್ ಗೋಸ್ವಾಮಿ ಸಂಭಾಷಣೆ, ಬಾಲನಾಯಕ ಸಂಕಲನ ಡಿಫರೆಂಟ್ ಡ್ಯಾನಿ ಸಾಹಸವಿದೆ.
ಚಿತ್ರದಲ್ಲಿ ಹೊಸ ಪ್ರತಿಭೆಗಳೊಂದಿಗೆ ಕಿಶೋರ,ಕರಿಸುಬ್ಬ, ಮಾನಸಿ ಪೂಜಾರಿ,ಚಿತ್ರ ನಿರ್ದೆಶಕ ಮಹೇಂದ್ರ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.