"ಶುಕ್ರ"ನ ಹೊಡೆದಾಟ
ಭಾನುವಾರ, 17 ಜೂನ್ 2007( 12:50 IST )
"ಕನ್ನಡದ ಕಂದ" ಯಶಸ್ವಿ ಕಂಡ ನಂತರ ನಟಿ ಲೀಲಾವತಿಯವರು ತಮ್ಮ ಮಗನಿಗಾಗಿ ಲೀಲಾವತಿ ಕಂಬೈನ್ಸ್ ಲಾಂಛನದಲ್ಲಿ ಕಥೆ ಬರೆದು, ಸದ್ದಿಲ್ಲದೆ "ಶುಕ್ರ" ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಜಿ.ಕೆ ಮುದ್ದುರಾಜ್ ನಿರ್ದೆಶನದ ಈ ಚಿತ್ರಕ್ಕೆ ಭೂತ ಬಂಗಲೆಯೊಂದರಲ್ಲಿ ವಿನೋದರಾಜ್ ರೌಡಿಗಳೊಂದಿಗೆ ಭಾರಿ ಹೊಡೆದಾಟದ ದೃಶ್ಯವನ್ನು ಇತ್ತೀಚೆಗೆ ಚಿತ್ರೀಕರಿಸಲಾಯಿತು.
ಈ ಚಿತ್ರಕ್ಕೆ ಸಂಭಾಷಣೆ ಶ್ರೀನಿವಾಸ್, ಕೌಶಿಕ್ ಛಾಯಾಗ್ರಹಣ ಮಲ್ಲಿಕಾರ್ಜುನ್, ಸಂಗೀತ ಗೌತಮ್, ಸಹ ನಿರ್ದೆಶನ ಜಗದೀಶ್, ಸಂಕಲನ ಕಿಶನ್, ಕಲೆ ಹೊಸ್ಮನೆ ಮೂರ್ತಿ, ಸಾಹಸ ಪಾಂಡ್ಯನ್.
ನೃತ್ಯ ಚೆನ್ನಿಪ್ರಕಾಶ, ಪ್ರಸಾದ್, ದೀಲಿಪ್ ಮೇಲ್ವಿಚಾರಣೆ ನಾಗರಾಜ, ನಿರ್ವಹಣೆ ಕೃಷ್ಣ, ತಾರಾಗಣದಲ್ಲಿ ವಿನೋದರಾಜ್, ಪ್ರಯಾ ದೀಕ್ಷಿತ್, ಮೋಹನ್‌ರಾಜ್, ಅಶ್ವಥ್ ನೀನಾಸಂ, ಬಿರಾದಾರ್, ಕುರಿಗಳು ಸಾರ್ ರಂಗಸ್ವಾಮಿ ಮುಂತಾದವರು ಅಭಿನಯಿಸುತ್ತಿದ್ದಾರೆ.