ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಗೆ ನಾಗತಿಹಳ್ಳಿ
ಬೆಂಗಳೂರು , ಬುಧವಾರ, 20 ಜೂನ್ 2007( 16:57 IST )
ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ ನಾಗತಿಹಳ್ಳಿ ಚಂದ್ರಶೇಖರ್ ನೇಮಕಗೊಂಡಿದ್ದಾರೆ. ಗುಣಾತ್ಮಕ ಚಿತ್ರಗಳಿಗೆ ಸಹಾಯಧನ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಗಿರೀಶ್ ಕಾಸರವಳ್ಳಿ ಆಯ್ಕೆಯಾಗಿದ್ದಾರೆ.
ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರುನಟ ರಾಮಕೃಷ್ಣ, ಪರ್ತಕರ್ತ ಇಸ್ಮಾಯಿಲ್, ಸಿನೆಮಾ ಛಾಯಾಗ್ರಾಹಕ ಬಿ.ಎಸ್.ಬಸವರಾಜು, ಗಾಯಕಿ ಬಿ.ಕೆ .ಸುಮಿತ್ರ, ನಿರ್ಮಾಪಕ ಕೆಸಿಎನ್ ಕುಮಾರ್, ರಂಗ ತಜ್ಞ ಡಾ.ನಾ.ದಾಮೋದರ ಶೆಟ್ಟಿ, ಕಲಾನಿರ್ದೇಶಕ ಶಶಿಧರ ಅಡಪ ಆ ಯ್ಕೆಯಾಗಿದ್ದಾರೆ.
ಗುಣಾತ್ಮಕ ಚಿತ್ರಗಳಿಗೆ ಸಹಾಯಧನ ಆಯ್ಕೆ ಸಮಿತಿ ಸಾಹಿತಿ ಗಿರಡ್ಡಿ ಗೋವಿಂದ ರಾಜ್, ಪ್ರೊ.ಕೆ.ಇ.ರಾಧಾಕೃಷ್ಣ, ರಂಗಕರ್ಮಿ ಸಿ.ಬಸವಲಿಂಗಯ್ಯ, ಪತ್ರಕರ್ತ ಬಿ.ಎನ್.ಸುಬ್ರಹ್ಮಣ್ಯ, ಭಾನು ಮುಷ್ತಾಕ್, ಚಲನಚಿತ್ರ ವಾಣಿಜ್ಯಮಂಡಳಿಯ ಕಾರ್ಯದರ್ಶಿ ವಿಜಯಕುಮಾರ್ ಅವರನ್ನು ಸರ್ಕಾರ ನೇಮಕಗೊಳಿಸಿದೆ.