ಕನ್ನಡ ಚಿತ್ರರಂಗ ಸಮಸ್ಯೆ- ಸಿಎಂಗೆ ಮನವಿ
ಬೆಂಗಳೂರು, ಬುಧವಾರ, 20 ಜೂನ್ 2007( 16:58 IST )
ಕನ್ನಡ ಚಿತ್ರರಂಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಕೂಡಲೇ ಚಿತ್ರರಂಗದ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ನಟ, ನಿರ್ದೇಶಕ, ನಿರ್ಮಾಪಕರು ಇಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಪರಭಾಷಾ ಚಿತ್ರದ ಹಾವಳಿ, ತೆರಿಗೆ ವಿನಾಯಿತಿ, ಚಿತ್ರನಗರಿ ನಿರ್ಮಾಣ ಸೇರಿದಂತೆ, ಹಲವು ಸಮಸ್ಯೆಗಳನ್ನು ಕನ್ನಡ ಚಿತ್ರರಂಗ ಎದುರಿಸುತ್ತಿದ್ದು, ಅವುಗಳಿಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಭರವಸೆ : ಸ್ವತಃ ಚಿತ್ರ ನಿರ್ಮಾಪಕರೂ, ಚಿತ್ರಗಳ ಹಂಚಿಕೆದಾರರೂ ಆಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು. ಇನ್ನೊಂದು ತಿಂಗಳಲ್ಲಿ ಚಿತ್ರರಂಗದ ಸಮಸ್ಯೆಗಳಿಗೆ ಎಲ್ಲಾ ರೀತಿಯ ಪರಿಹಾರ ಒದಗಿಸಲು ಸಭೆಯನ್ನು ಕರೆಯಲಾಗುವುದು ಎಂದರು.
ಚಿತ್ರರಂಗದ ಈ ನಿಯೋ ಗದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಯ ಅಧ್ಯಕ್ಷ ತಲ್ಲಂ ನಂಜುಂಡ ಶೇಟ್ಟಿ, ಪಾರ್ವತಮ್ಮ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ರಾಕ್ ಲೈನ್ ವೆಂಕಟೇಶ್, ಸಂದೇಶ್ ನಾಗರಾಜ್, ನಟ ವಿಷ್ಣುವರ್ಧನ್, ಮತ್ತಿತರರು ಭಾಗವಹಿಸಿದ್ದರು.