ಚಿತ್ರೀಕರಣದಲ್ಲಿ ಸಖತ್ ಎಂಜಾಯ್ ಮಾಡಿದ್ದೇನೆ. ಕನ್ನಡ ಚಿತ್ರರಂಗದ ಎಲ್ಲರಿಗೂ ಹೊಂದಿಕೊಂಡಿದ್ದೇನೆ ಎನ್ನುವ ಜೆನಿಫರ್, ಸತ್ಯವಾನ್ ಸಾವಿತ್ರಿ ಪ್ರಮುಖ ಆಕರ್ಷಣೆ.
ಅಂದ ಹಾಗೆ ಚಿತ್ರ ಬಿಡುಗಡೆಗೆ ರೆಡಿಯಾಗಿದೆ ಎಂದರು ರಮೇಶ್ ಅರವಿಂದ್. ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದೇವೆ. ಕಥೆ ಅದ್ಬೂತ ವಾಗಿದೆ. ಹೊಟ್ಟೆಹುಣ್ಣಾಗುವಂತೆ ಎಲ್ಲರನ್ನೂ ಈ ಚಿತ್ರ ನಗಿಸಲಿದೆ. ಚಿತ್ರ ಹಿಟ್ ಆಗೋದರಲ್ಲಿ ಅನುಮಾನವೇ ಇಲ್ಲ ಎಂಬುದು ರಮೇಶ್ ಅನಿಸಿಕೆ.
ಈ ಹಿಂದೆ ರಾಮಶಾಮ ಭಾಮ ಚಿತ್ರ ಗುರುಕಿರಣ್ ಸಂಗೀತ ನೀಡಿದ್ದರು. ಅದು ಸಖತ್ ಹಿಟ್ ಕೂಡಾ ಆಗಿತ್ತು. ಇದೇ ಕಾರಣಕ್ಕೆ ಗುರುಕಿರಣ್ ಈ ಚಿತ್ರಕ್ಕೂ ತಮ್ಮ ಸುಮಧುರ ಸಂಗೀತ ನೀಡಿದ್ದರು.
ಡಾ.ಸತ್ಯ ಹಾಡು ಅನೇಕರಿಗೆ ಇಷ್ಟ ಆಗಿದೆ. ಈ ಹಾಡನ್ನು ಹು ಡುಗಾ, ಹುಡುಗಾ ಹಾಡಿನ ಖ್ಯಾತಿಯ ಚೈತ್ರಾ ಹಾಡಿದ್ದಾರಂತೆ. ಮೋಹನ್ ಚಿತ್ರಕಥೆ ಹಾಗೂ ಸಂಬಾಷಣೆಯನ್ನು ಬರೆದಿದ್ದಾರೆ. ಒಟ್ಟಾರೆ ಚಿತ್ರ ಲವಲವಿಕೆಯಿಂದ ಹೊರ ಬಂದಿದೆ. ಪ್ರೇಕ್ಷಕರಿಗೂ ಚಿತ್ರ ಇಷ್ಟವಾಗಲಿದೆ ಎನ್ನುತ್ತಾರೆ ರಮೇಶ್.