ಮುನಿರತ್ನಂ - ಅನಾಥರು..
ಬೆಂಗಳೂರು, ಶನಿವಾರ, 23 ಜೂನ್ 2007( 18:24 IST )
ಚಿತ್ರದ ಶೀರ್ಷಿಕೆ 'ಅನಾಥರು.' ಹಾಗೆಂದು ನಾನು ಅನಾಥನಲ್ಲ. ಏಕೆಂದರೆ ಜೊತೆಯಲ್ಲಿ ನೀವೆಲ್ಲ ಇದ್ದಿರಲ್ಲ. ನಿರ್ಮಾಪಕ ಮುನಿರತ್ನಂ ಅವರ ಮಾತು ಆರಂಭವಾದುದೇ ಚಿತ್ರದ ಶೀರ್ಷಿಕೆಯ ಕುರಿತು ಸ್ಪಷ್ಟನೆ ಹಾಗೂ ಪತ್ರಕರ್ತರ ಹೊಗಳಿಕೆಯೊಂದಿಗೆ.
'ರಕ್ತ ಕಣ್ಣಿರು' ಸಿನಿಮಾದ ಸಂದರ್ಭದಲ್ಲೂ ಟೈಟಲ್ ಬಗ್ಗೆ ಕೆಲವರು ಅಪಸ್ವರ ಎತ್ತಿದ್ದರು. ನಿರ್ಮಾಪಕನ ಕಣ್ಣಲ್ಲಿ ರಕ್ತ ಕಣ್ಣಿರು ಬರುತ್ತೇ ಎಂದವರೂ ಇದ್ದರು. ಆದರೆ ಜನ ಚಿತ್ರ ಗೆಲ್ಲಿಸಿದರು.
ಈಗಲೂ ಅಷ್ಟೇ, ಪ್ರೇಕ್ಷಕರು ಅನಾಥರ ಕೈ ಬಿಡೊಲ್ಲ ಎಂದು ಮುನಿರತ್ನಂ ಆತ್ಮ ವಿಶ್ವಾಸ ವ್ಯಕ್ತಪಡಿಸಿದರು. ಪತ್ರಕರ್ತರಿಗೆ ತೋರಿಸಿಯೇ ಸಿನಿಮಾ ಬಿಡುಗಡೆ ಮಾಡುತ್ತೇನೆ ಅವರು ಕೆಟ್ಟದಾಗಿದೆ ಎಂದರೆ ಸಿನಿಮಾ ಬಿಡುಗಡೆ ಮಾಡುವುದೇ ಇಲ್ಲವೆಂದರು.