ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಾಬಾ ಚಿತ್ರದಲ್ಲಿ ನೂತನ ಡೈಲಾಗ್
ಸುದ್ದಿ/ಗಾಸಿಪ್
Feedback Print Bookmark and Share
 
ದೇವರೇ ನನ್ನನ್ನು ದೊಡ್ಡ ರೌಡಿಯನ್ನಾಗಿ ಮಾಡು ನಮ್ಮಪ್ಪಂಗೆ ಒಳ್ಳೆ ಬುದ್ದಿ ಕೊಡು ಬಾಬಾ ಚಿತ್ರದ ನಾಯಕನ ಪ್ರಾರ್ಥನೆ ಇದು.

ರೌಡಿ ಮಾಡೆಂದು ಕೋರುವುದರಲ್ಲಿ ಅಸಹಜತೆಯೇನಿದೆ ಎನ್ನುವುದು ಬಾಬಾ ನಿರ್ದೇಶಕ ತ್ರಿಶೂಲ್ ಅವರ ಮರು ಪ್ರಶ್ನೆ. ಕಂಸನನ್ನು ವಧಿಸಿಕೃಷ್ಣ ಕೂಡಾ ರೌಡಿನೇ. ಆದರೆ ಆತನನ್ನು ಪೂಜಿಸುವುದಿಲ್ಲವೇ ತ್ರಿಶೂಲ್ ಸಂಶೋಧನೆಗೆ ಜನರೆಲ್ಲಾ ಕಕ್ಕಾಬಿಕ್ಕಿ .

ಇದು ಲಾಂಗ್ - ಮಚ್ಚು ಚಿತ್ರವಲ್ಲಾ ಬಾ..ಬಾ... ಎಂದು ಅವನು ನಾಯಕಿಯ ಬೆನ್ನು ಬೀಳುತ್ತಾನೆ. ಆದರೆ ಆತ ಹಿಂಸೆಯ ಹಿಂಬಾಲಕನಲ್ಲಾ. ಆದರೆ ಚಿತ್ರದ ಪೋಸ್ಟರ್‌ಗಳಲ್ಲಿ ಮಾತ್ರ ನಾಯಕನ ಕೈಯಲ್ಲಿ ಲಾಂಗ್ -ಹಾಕಿ ಸ್ಟಿಕ್ ಮಿಂಚುತ್ತಿದ್ದವು.

ಬಾಬಾ ನಾಯಕ ಕಾರ್ತಿಕ್ ಪ್ರಥಮ ಪಿಯುಸಿ ವಿದ್ಯಾರ್ಥಿ.ತುಂಟಿ ತುಂಟಿ ಎನ್ನುವ ಅಪೂರ್ಣ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸೆಂಟಿಮೆಂಟ್ ಇಲ್ಲದ ರಫ್ ಕ್ಯಾರೆಕ್ಟರ್ ಎಂದು ಬಾಬಾ ಚಿತ್ರದಲ್ಲಿನ ತಮ್ಮ ಪಾತ್ರವನ್ನು ಬಣ್ಣಿಸಿಕೊಂಡರು.