ಯುಗ ಯುಗಗಳೇ ಸಾಗಲಿ
ಬೆಂಗಳೂರು, ಭಾನುವಾರ, 24 ಜೂನ್ 2007( 13:54 IST )
ಯುಗಯುಗಗಳೇ ಸಾಗಲಿ .... ಇದು ಎಲ್ಲರ ಮನದಲ್ಲೂ ಉಳಿದುಸಕೊಂಡ ಹಾಡಿನ ಸಾಲೂ ಹೌದು. ಹಾಗೇ , ಈಗ ಹೊಸದಾಗಿ ನಿರ್ಮಾಣವಾಗುತ್ತಿರುವ ಕನ್ನಡ ಸಿನಿಮಾ ಚಿತ್ರದ ಹೆಸರು ಕೂಡಾ ಆಗಿದೆ.
ಕಳೆದ ಭಾನುವಾರ ಕಂಠೀರವ ಸ್ಟುಡೀಯೋದಲ್ಲಿ ಚಿತ್ರದ ಮುಹೂರ್ತ ನೆರವೇರಿತು. ಇದರಲ್ಲಿ ಎರಡು ಪ್ರಿತಿಗಳ ಕಥೆ ಇದೆ. ಬಿ.ಯು ವಸಂತಕುಮಾರ್ ಚಿತ್ರವನ್ನು ನಿರ್ಮಿಸುತ್ತಿದ್ದು ನಿರ್ದೇಶನದ ಹೊಣೆಯನ್ನು ಶಶಾಂಕ್ ರಾಜ್ ಹೊತ್ತುಕೊಂಡಿದ್ದಾರೆ.
ನಟ ರವಿಚಂದ್ರನ್ ಅವರ ಹಳ್ಳಿ ಮೇಸ್ಟ್ರು ಚಿತ್ರದಿಂದ ಹಿಡಿದು ಆನಂತರ ಅವರ ಬಹುತೇಕ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅನುಭವ ಶಶಾಂಕ್ ಅವರಿಗಿದೆ.