ಐಸ್‌ಪೈಸ್ ಚಿತ್ರಕ್ಕೆ ಮುಹೂರ್ತ
ಬೆಂಗಳೂರು, ಭಾನುವಾರ, 24 ಜೂನ್ 2007( 13:55 IST )
ಐಸ್‌ಪೈಸ್ ಇದು ಹದಿನಾರಾಣೆ ಕನ್ನಡಿಗರ ಸಿನಿಮಾ. ಹೊಸಬರ ಸಿನಿಮಾ ಕೂಡಾ. ಹೆಮ್ಮೆಯಿಂದ ಹೇಳಿಕೊಂಡರು ಚಿತ್ರದ ನಿರ್ದೇಶಕ ಪ್ರಶಾಂತ್.
ಅವರು ಕೂಡಾ ನಿರ್ದೇಶನಕ್ಕೆ ಹೊಸಬರೇ. ಈ ಮೊದಲು ಅಂಬಿ, ಲವ್ ಸ್ಟೋರಿ, ಚಿತ್ರಗಳಲ್ಲಿ ದುಡಿದಿದ್ದರೂ ಸ್ವತಂತ್ರವಾಗಿ ನಿರ್ದೇಶನದ ಹೊಣೆ ಹೊತ್ತಿರುವುದು ಈಗಲೇ.
ಐಸ್‌ಪೈಸ್ ಚಿತ್ರದ ಹಾಡುಗಳ ಧ್ವನಿಮುದ್ರಣ ಸಂದರ್ಭದಲ್ಲಿ ಮಾತನಾಡಿದ ಅವರು ತಮ್ಮ ಸಿನಿಮಾ ನಂಟಿನ ವಿವರಗಳನ್ನು ನೀಡಿದರು.ರಾಜ್ಯದ 18 ಜಿಲ್ಲೆಗಳಲ್ಲಿ ಶೂಟಿಂಗ್ ನಡೆಸುತ್ತೇವೆ ಎಂದಿದ್ದಾರೆ.
ಜೂನ್ ಕೊನೆಯಲ್ಲಿ ಅಥವಾ ಜುಲೈ ಮೊದಲ ಭಾಗದಲ್ಲಿ ಚಿತ್ರೀಕರಣ ಆರಂಭವಾಗುತ್ತದೆ.ನವೆಂಬರ್ ತಿಂಗಳಿನಲ್ಲಿ ಚಿತ್ರ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.