ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಶಿವಾನಿ'ಗಾಗಿ ಹರಕೆ ಕಟ್ಟಿದ ಪ್ರೇಮಿ
ಸುದ್ದಿ/ಗಾಸಿಪ್
Feedback Print Bookmark and Share
 
ಕಥಾನಾಯಕ ವಿಜಯ್ ಈ ಶ್ವರ ದೇವಸ್ಥಾನಕ್ಕೆ ಬಂದಿದ್ದಾನೆ. ಅಲ್ಲಿ ಅಜ್ಜಿಯೊಬ್ಬಳು ಮರಕ್ಕೆ ಹರಕೆ ಕಟ್ಟುವುದನ್ನು ಕಂಡು ಕುತೂಹಲದಿಂದ ಕೇಳುತ್ತಾನೆ.

ಆ ಅಜ್ಜಿ ತನ್ನ ಮಗ ಮನೆ ಬಿಟ್ಟು ಹೋಗಿ ಹದಿನೈದು ವರ್ಷಗಳಾಗಿವೆ. ಇಲ್ಲಿ ಹರಕೆ ಕಟ್ಟಿದರೆ ಮಗ ಮನೆಗೆ ಬರುತ್ತಾನೆ ಎನ್ನುವ ನಂಬಿಕೆಯಿಂದ ಹರಕೆ ಕಟ್ಟುತ್ತಿದ್ದೇನೆ ಅನ್ನುತ್ತಾಳೆ .

ಮತ್ತೆ ಆಕೆಯೇ ವಿಜಯ್‌ಗೆ ನಿನೇನಾದ್ರೂ ಮನಸ್ಸಿನಲ್ಲಿ ಅಂದುಕೊಂಡಿದ್ದೀಯಾ ಎಂದು ಕೇಳುತ್ತಾಳೆ. ಅದಕ್ಕೆ ವಿಜಯ್ ತಾನೊಬ್ಬಳು ಹುಡುಗಿಯನ್ನು ಪ್ರೀತಿಸುತ್ತಿದ್ದು ಆ ಹುಡುಗಿ ತನ್ನ ಜೊತೆ ಕೊನೆವರೆಗೆ ಇರಲಿ ಎನ್ನುವ ಆಸೆಯಿಂದ ತಾನು ಹರಕೆ ಕಟ್ಟತೊಡಗುತ್ತಾನೆ.

ಆ ಹೊತ್ತಿಗೆ ಗೆಳೆಯನೊಬ್ಬ ಆತುರವಾಗಿ ಬಂದು ವಿಜಯ್ ಶಿವಾನಿಗೆ ಎಂಗೇಜ್‌ಮೆಂಟ್ ನಡೆಯುತ್ತಿದೆ ಎನ್ನುತ್ತಾನೆ ಆ ಮಾತು ಕೇಳಿ ವಿಜಯ್ ಹರಕೆ ಕಟ್ಟುವುದನ್ನು ಅರ್ಧಕ್ಕೆ ನಿಲ್ಲಿಸುತ್ತಾನೆ. ಈ ಸನ್ನಿವೇಶವನ್ನು ಶಿವಾನಿ ಚಿತ್ರಕ್ಕಾಗಿ ನಿರ್ದೇಶಕ ವಿಶಾಲರಾಜ್ ಚಿತ್ರಿಸಿಕೊಂಡರು.