ಒಮ್ಮೆ ನೋಡಿದೆ..ಹಾಡೊಂದು ಬಾಕಿ
ಬೆಂಗಳೂರು, ಭಾನುವಾರ, 24 ಜೂನ್ 2007( 14:03 IST )
ಆರ್.ಇಂದ್ರ ರಾಜೇಂದ್ರ ನಿರ್ಮಿಸುತ್ತಿರುವ ಒಮ್ಮೆ ನೋಡಿದೆ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು ಕಳೆದ ವಾರ ನೆಲಮಂಗಲ ಸುತ್ತಮುತ್ತ ಹಾಡೊಂದನ್ನು ಚಿತ್ರಿಸಿಕೊಳ್ಳಲಾಯಿತು.
ಇನ್ನೊಂದು ಹಾಡಿಗೆ ಚಿತ್ರೀಕರಣ ನಡೆಯುವುದು ಬಾಕಿ ಇದೆ. ಎಂ.ಕೆ ಸ್ವಾಮಿ ನಿರ್ದೇಶನದ ಈ ಚಿತ್ರಕ್ಕೆ ಸಿ.ನಾರಾಯಣ ಛಾಯಾಗ್ರಹಣ ಎಂ.ಎಸ್. ಗಿರಿಧರ್ ಸಂಗೀತ, ಕಪಿಲ್ ನೃತ್ಯನಿರ್ದೇಶನವಿದೆ.
ಹಿನ್ನೆಲೆಯಲ್ಲಿ ಸೂಪರ್ ಸುಬ್ಬು ಸಾಹಸವಿದ್ದು ತಾರಾಬಳಗದಲ್ಲಿ ಗೌತಮ್ ,ರೂಪಶ್ರೀ, ಕವಿತಾ , ಸುನಿಲ್ ,ಶ್ಯಾಮ,ತ್ರಿಶಾ, ಬಿ.ಕೆ.ಶಂಕರ್, ಬಿರಾದಾರ್, ಚಂದ್ರಹಾಸ್ ಸುವರ್ಣ,ಸೇರಿದಂತೆ ಇನ್ನಿತರರು ತಾರಾಗಣದಲ್ಲಿದ್ದಾರೆ.