ಚೆಲುವಿನಚಿತ್ರದಲ್ಲಿ ಅಮೂಲ್ಯಾ
ಬೆಂಗಳೂರು, ಭಾನುವಾರ, 24 ಜೂನ್ 2007( 14:51 IST )
ಬಾಲನಟಿಯಾಗಿದ್ದ ಅಮೂಲ್ಯಾ ಈಗ ಚೆಲುವಿನ ಚಿತ್ರ ರಚಿಸುತ್ತಿದ್ದಾರೆ. ಕಲಾಕಾರಿಯಲ್ಲ, ಕಲಾವಿದೆಯಾಗಿದ್ದಾರೆ.
ಎಸ್ ನಾರಾಯಣ್ ನಿರ್ದೇಶನದ ಚೆಲುವಿನ ಚಿತ್ರಗಳ'ಚೆಲುವಿನ ಚಿತ್ರಗಳು'ಸಿನೆಮಾದಲ್ಲಿ ಅಮೂಲ್ಯಾ ತನ್ನ ಚೊಚ್ಚಲ ಅಭಿನಯವನ್ನು ಭರವಸೆಯೊಂದಿಗೆ ಆರಂಭವಿಸಿದ್ದಾರೆ.
ಮುಂಗಾರುಮಳೆ ಯಶಸ್ವಿ ನಾಯಕ ಗಣೇಶ್ ಅವರೊಂದಿಗೆ ಭರವಸೆಯ ಹೆಜ್ಜೆ ಇರಿಸಿರುವ ಅಮೂಲ್ಯಾ ಅವರೊಂದಿಗೆ ತಾರಾಗಣದಲ್ಲಿ ಶಿವರಾಜ್ ಕುಮಾರ್, ರಕ್ಷಿತಾ, ಅವಿನಾಶ್ ಮುಂತಾದವರಿದ್ದಾರೆ.
ಚೆಲುವಾಂಬಿಕಾ ಪಿಕ್ಚರ್ಸ್ ಲಾಂಛನದಲ್ಲಿ ತೆರೆಕಾಣಲಿರುವ ಚೆಲುವಿನ ಚಿತ್ರಗಳು. ಕಥೆ ಚಿತ್ರಕಥೆ ಗೀತೆಗಳು ನಿರ್ಮಾಣ ನಿರ್ದೇಶನ ಇತ್ಯಾದಿಗಳೆಲ್ಲಾ ಎಸ್. ನಾರಾಯಣ್ ಕೊಡುಗೆಯಾಗಿರುತ್ತದೆ.
ಚೈತ್ರದ ಪ್ರೇಮಾಂಜಲಿ,ಚೆಲುವಿನ ಚೈತ್ರಕಾಲ, ಚಂದ್ರ ಚಕೋರಿ,ಸೂರ್ಯವಂಶ,ಶಬ್ದವೇಧಿ,ಸೇವಂತಿಸೇವಂತಿ,ಸಿಂಹಾದ್ರಿಯಸಿಂಹ ಮುಂತಾದ ಸರಣಿ ಹಿಟ್ಗಳನ್ನು ನೀಡಿದ ನಾರಾಯಣ್ ಈ ಚಿತ್ರದ ಮೂಲಕ ಸೂಪರ್ ಹಿಟ್ ಫಲಿತಾಂಶ ನಿರೀಕ್ಷೆಯಲ್ಲಿದ್ದಾರೆ.