ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮೀರಾ...ಮಾಧವ..ರಾಘವ
ಸುದ್ದಿ/ಗಾಸಿಪ್
Feedback Print Bookmark and Share
 
T N Seetharam
WD
ನಿರ್ದೇಶಕ ಟಿ. ಎನ್. ಸೀತಾರಾಂ ಮೀರಾ...ಮಾಧವ..ರಾಘವ ಮುಗಿಸಿದ ಖುಷಿಯಲ್ಲಿದ್ದರು.

ಕರ್ನಾಟಕದಲ್ಲೇ ಸಿನಿಮಾವನ್ನು ಚಿತ್ರೀಕರಿಸಿದ , ಕನ್ನಡದ ತಂತ್ರಜ್ಞರು , ಕಲಾವಿದರು ಕೆಲಸ ಮಾಡಿದ ಪೂರ್ತಿಯಾಗಿ ಕನ್ನಡಮಯವಾಗಿರುವ ಸಿನಿಮಾ ಮಾಡಿದ ಖುಷಿ ತೃಪ್ತಿ ಅವರದಾಗಿತ್ತು. ಅದನ್ನು ಅವರು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದರು.

ಎಲ್ಲವನ್ನು ಕನ್ನಡದಲ್ಲಿ ಮಾಡಿದ್ದೇವೆ. ಕಡು ಬೇಸಿಗೆಯಲ್ಲಿ ಕನ್ನಡ ನಾಡು ಸುಂದರವಾಗಿ ಸಿನಿಮಾದಲ್ಲಿ ಕಂಡು ಬಂದಿದೆ. ಸಿನಿಮಾದಲ್ಲಿ ಕನ್ನಡದ ಗಾಯಕರೇ ಹಾಡಿದ್ದಾರೆ. ನಲವತ್ತು ದಿನಗಳ ಚಿತ್ರೀಕರಣ ನಡೆಸಿದ್ದೇವೆ.

ಮನಸ್ಸಿನಲ್ಲಿ ಸಂಕೋಚ, ಅಳಕು, ಅಧೈರ್ಯ ಇಲ್ಲದೇ ಮಾಡಿದ್ದೇನೆ. ಸಿನಿಮಾ ನೋಡಿದವರು ಚೆನ್ನಾಗಿದೆ ಎಂದು ಹೇಳಿದ್ದಾರೆ ಎಂದ ಸೀತಾರಾಂ ಮಾತಿನಲ್ಲಿ ವಿಶ್ವಾಸವಿತ್ತು. ಸಂಗೀತ ನಿರ್ದೇಶಕ ಹಂಸಲೇಖಾ ಕನ್ನಡದ ಪ್ರತಿಭೆಗಳಿಗೆ ಅವಕಾಶ ನೀಡುವಂತೆ ಮಾತನಾಡಿದರು.

ಅಂದುಕೊಂಡಂತೆ ಸಿನಿಮಾ ಬಂದಿದೆ. ಸೀತಾರಾಂ ಒಂದು ಹಾಡು ಹೇಳಿದ್ದರು. ಈಗ ಅದು ಏಳು ಹಾಡುಗಳಾಗಿವೆ ಎಂದು ಸೀತಾರಾಂರನ್ನು ಮೆಚ್ಚಿ ಮಾತನಾಡಿದರು.