ಕನ್ನಡಕ್ಕೆ ರಾಖಿ ಸಾವಂತ್
ಬೆಂಗಳೂರು, ಶನಿವಾರ, 30 ಜೂನ್ 2007( 12:42 IST )
ಹರೆಯದ ಹುಡುಗರನ್ನ ಮೋಡಿ ಮಾಡಿದ ಹೆಸರಾಂತ ಐಟಂಗರ್ಲ್ ರಾಖಿ ಸಾವಂತ್ ಕನ್ನಡ ಚಿತ್ರವೊಂದರಲ್ಲಿ ಐಟಂ ಹಾಡಿನಲ್ಲಿ ಹೆಜ್ಜೆ ಹಾಕಲಿದ್ದಾಳೆ.
ದುನಿಯಾ ಚಿತ್ರದ ಹೀರೋ ವಿಜಯ್ ಅಭಿನಯದ ಹೊಸ ಚಿತ್ರ ಗೆಳೆಯದಲ್ಲಿ ರಾಖಿ ಕಾಣಿಸಿಕೊಳ್ಳಲಿದ್ದಾಳೆ. ಜಸ್ಟ್ ಒಂದು ಹಾಡಿಗೆ ಹೆಜ್ಜೆ ಹಾಕಲು ಈಕೆ 15 ಲಕ್ಷ ಸಂಭಾವನೆ ಡಿಮಾಂಡ್ ಮಾಡಿರುವ ಸುದ್ದಿ ಸಿಕ್ಕಿದೆ.
ಬಾಲಿವುಡ್ ಹೆಸರಾಂತ ಐಟಂ ಕಲಾವಿದೆಯರು ಕನ್ನಡದಲ್ಲಿ ಅಭಿನಯಿಸುತ್ತಿರುವುದು ಹೊಸತಲ್ಲ.
ಈಗಾಗಲೇ ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದಲ್ಲಿ ಮಲ್ಲಿ ಕಾ ಶೆರಾವತ್, ಜೋ ಗಿ ಚಿತ್ರದಲ್ಲಿ ಯಾನಾ ಗುಪ್ತಾ, ಒರಟ ಐ ಲೈವ್ ಯೂ ನಲ್ಲಿ ಮುಮೈತ್ ಖಾನ್ ನಟಿಸಿ ಸುದ್ದಿ ಮಾಡಿದ್ದರು. ಇದೀಗ ರಾಖಿ ಸರದಿ.