ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಳೆದ ವಾರ ಸೆಟ್ಟೇರಿವೆ11 ಸಿನೆಮಾಗಳು
ಸುದ್ದಿ/ಗಾಸಿಪ್
Feedback Print Bookmark and Share
 
ಗಾಂಧಿ ನಗರದಲ್ಲಿ ಕಳೆದ ವಾರ 11 ಸಿನೆಮಾಗ ಳು ಸೆಟ್ಟೇರಿವೆ. ಇಷ್ಟೊಂದು ಕಡಿಮೆ ಅವಧಿಯಲ್ಲಿ ಇಷ್ಟು ಸಂಖ್ಯೆಯ ಚಿತ್ರಗಳು ಸೆಟ್ಟೇರಿರುವುದು ಅನೇಕರಿಗೆ ಕುತೂಹಲ ತಂದಿದೆ.

ಮುಂಗಾರು ಮಳೆ, ದುನಿಯಾ ಯಶಸ್ಸು ಹೊಸ ನಿರ್ಮಾಪಕರು ಗಾಂಧಿ ನಗರದತ್ತ ಮುಖ ಮಾ ಡುವಂತೆ ಮಾಡಿದೆ. ಹೊಸಬರನ್ನೇ ಕಟ್ಟಿಕೊಂಡು ಚಿತ್ರ ನಿರ್ಮಾಣ ಮಾಡಿ ಗೆಲ್ಲುವ ಉತ್ಸಾಹ ಕೂಡ ಹೆಚ್ಚುತ್ತಿದೆ.

ಹನ್ನೊಂದು ಚಿತ್ರಗಳಲ್ಲಿ 9 ಚಿತ್ರಗಳೂ ಕೂಡ ಹೊಸಬರದೇ. ಯುಗಯುಗಗಳೇ ಸಾಗಲಿ, ಹೋರಾಟ, ಮರುಭೂಮಿ, ಹೀಗೆ ಹೊಸಹೊಸ ಚಿತ್ರಗಳು ಕನ್ನಡ ಚಿತ್ರರಸಿಕರಿಗೆ ನಿರ್ಮಾಣಗೊ ಳ್ಳುತ್ತಿವೆ.

ಹೊಸ ನಟ-ನಟಿಯರ ಮೇಲೆ ಒಂದು ಅಂದಾಜಿ ನಂತೆ ಸುಮಾರು 20 ಕೋಟಿ ರೂ ಹಣವನ್ನು ನಿರ್ಮಾಪಕರು ಹೂಡಿದ್ದಾರೆ. ಹಣ ವಾಪಸ್ಸ್ ಬಂದೀತೇ ?

ಇನ್ನೆರಡು ಮೂರು ತಿಂಗಳಲ್ಲಿ 11ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಗೊಳ್ಳಲಿದ್ದು, ಆಗ ಚಿತ್ರಮಂದಿರ ಸಮಸ್ಯೆ ಹುಟ್ಟುಕೊಳ್ಳುವ ಸಾಧ್ಯತೆಯಿದೆ.