ತಮಾಷೆಗಾಗಿ ಥಿಯೇಟರಿಲ್ಲ.
ಸೋಮವಾರ, 2 ಜುಲೈ 2007( 11:23 IST )
ಕೋಡ್ಲು ರಾಮಕೃಷ್ಣ ನಿರ್ದೇಶನದ ತಮಾಷೆಗಾಗಿ ಚಿತ್ರ ಬಿಡುಗಡೆಗೆ ಸಿದ್ಧಗೊಂಡಿದೆ. ಆದರೆ ಬಿಡುಗಡೆಗೆ ಚಿತ್ರಮಂದಿರವೇ ಇಲ್ಲದ ಪರಿಸ್ಥಿತಿ.
ಚಿತ್ರೀಕರಣವಾಗಿ ತಿಂಗಳುಗಳೇ ಆಯ್ತು. ಒಂದೆಡೆ ಪ್ರೇಮ್ ಅಭಿನಯದ ಪಲ್ಲಕ್ಕಿ ಚಿತ್ರ ಓಡುತ್ತಿದೆ. ಮೊನ್ನೆಯಷ್ಟೇ 50 ದಿನ ಪೂರೈಸಿದೆ. ಪಲ್ಲಕ್ಕಿ ಚಿತ್ರದ ಗಳಿಕೆ ಕಡಿಮೆಯಾಗಿದೆ. ಆದರೆ ನಿರ್ಮಾಪರು ಉಚಿತ ಟಿಕೆಟ್ ನೀಡಿ ವೀಕ್ಷಕರಿಗೆ ಚಿತ್ರ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ.
ಇದಕ್ಕೆ ಕೋಡ್ಲು ಗರಂ ಆಗಿದ್ದಾರೆ. ಮೇನಕಾ ಥಿಯೇಟರ್ ಬಿಟ್ಟುಕೊಡದಿದ್ರೆ ಧರಣಿ ಕೂರುವ ಬೆದರಿಕೆ ಒಡ್ಡಿದ್ದಾರೆ. ಆದರೆ ಈ ಬಗ್ಗೆ ಥಿಯೇಟರ್ ಮಾಲೀಕರು ಹೇಳುವುದು ಹೀಗೆ : ನಮಗೆ ಥಿಯೇಟರನ್ನು ಬಾಡಿಗೆ ಕೊಡುತ್ತಿರುವವರು ಪಲ್ಲಕ್ಕಿ ನಿರ್ಮಾಪಕರು ಅವರನ್ನೇ ಹೋಗಿ ಕೇಳಿ ಅಂತ.
ತಮಾಷೆಗಾಗಿ ಚಿತ್ರ ಬಿಡುಗಡೆ ಒಟ್ಟಾರೆ ನೋವಿನಿಂದ ಕೂಡಿದೆ. ಈ ಬಗ್ಗೆ ಸಮಸ್ಯೆಗಳನ್ನು ಹೇಳಿಕೊಂಡರೆ ನಾ ಹೇಳುವುದು ತಮಾಷೆಗಾಗಿ ಎಂದು ಜನ ಭಾವಿಸುತ್ತಿದ್ದಾರೆ ಎನ್ನುತ್ತಾರೆ ಕೋಡ್ಲು