ಇಂದು ಗಣೇಶ್ ಹುಟ್ಟುಹಬ್ಬ
ಸೋಮವಾರ, 2 ಜುಲೈ 2007( 18:58 IST )
ಇಂದು ಕನ್ನಡದ ಮೆಗಾಸ್ಟಾರ್ ಗಣೇಶ್ ಹುಟ್ಟುಹಬ್ಬ ಸಂಭ್ರಮ. ಮುಂಗಾರು ಮಳೆಯ ಮುಖೇನ ಕನ್ನಡ ಚಿತ್ರ ರಸಿಕರ ಮನಸ್ಸನ್ನು ಗೆದ್ದ, ಗಣೇಶ್ ಗೆ ಇಂದು ನಗರದೆಲ್ಲೆಡೆ ಚಿತ್ರ ರಸಿಕರು ಶುಭಕೋರಿದರು.
ಚೆಲ್ಲಾಟ ಚಿತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಪಡೆದ ಗಣೇಶ್ ಮುಂಗಾರು ಮಳೆಯೆಂಬ ಅತ್ಯಂತ ಹಿಟ್ ಚಿತ್ರವನ್ನು ನೀಡುವ ಮೂಲಕ ಇಂದು ಎಲ್ಲೆಡೆ ಮನೆ ಮಾತು.
ಐದು ಹೊಸ ಚಿತ್ರಗಳಿಗೆ ಸಹಿ ಮಾಡಿರುವ ಗಣೇಶ್, ಸದ್ಯ ಕನ್ನಡದ ಅತ್ಯಂತ ಬೇಡಿಕೆಯ ನಟ. ಗಣೇಶ್ ಅಭಿನಯದ ಮುಂಗಾರು ಮಳೆ, ಚೆಲ್ಲಾಟ, ಹುಡುಗಾಟ, ಚಿತ್ರಗಳು ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿವೆ.
ಗೋಲ್ಡನ್ ಸ್ಟಾರ್ ಎಂಬ ಅಭಿದಾನಕ್ಕೆ ಪಾತ್ರವಾಗಿರುವ ಗಣೇಶ್ಗೆ ಇಂದು ಎಲ್ಲರೂ ಶುಭಕೋರುತ್ತಿದ್ದಾರೆ.
ಮುಂಜಾನೆಯಿಂದಲೇ ಗಣೇಶ್ ಮನೆಗೆ ಯುವಕ-ಯುವತಿಯರ ದಂಡೇ ಶುಭಕೋರಲು ಆಗಮಿಸುತ್ತಿದೆ. ಕನ್ನಡ ಚಾನಲ್ ಗಳು, ರೇಡಿಯೋಗಳು ಗಣೇಶ್ ಹಾಡುಗಳನ್ನು ಇಂದು ಪ್ರಸಾರ ಮಾಡುವ ಮುಖೇನ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಿದೆ.