ಕನ್ನಡದ ಹುಡುಗಿಯ ಬಾಲಿವುಡ್ ಪಯಣ
ಬೆಂಗಳೂರು, ಬುಧವಾರ, 4 ಜುಲೈ 2007( 17:37 IST )
ಕನ್ನಡದ ಹುಡುಗಿ ದೀಪಿಕಾ ಪಡುಕೋಣೆ ಇದೀಗ ಬಾಲಿವುಡ್ ನಲ್ಲಿ ಬ್ಯುಸಿ. ಮೊದಲ ಪ್ರಯತ್ನದಲ್ಲೇ ನಟ ಶಾರುಖ್ ನೊಂದಿಗೆ ಆಕೆ ಕಾಣಿಸಿಕೊಳ್ಳುತ್ತಿದ್ದಾಳೆ.
ಕನ್ನಡದಲ್ಲಿ ಮೊದಲ ಬಾರಿಗೆ ಇಂದ್ರಜಿತ್ ಲಂಕೇಶ್ ಅಭಿನಯದ ಐಶ್ವರ್ಯ ಚಿತ್ರದ ಮುಖೇನ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಈ ಕೊಂಕಣಿ ಹುಡುಗಿಗೆ ಬಾಲಿವುಡ್‌ನಲ್ಲಿ ಸಖತ್ ಬೇಡಿಕೆ.
ಖ್ಯಾತ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಅವರ ಪುತ್ರಿಯಾಗಿರುವ ದೀಪಿಕಾ ಹೆಸರಾಂತ ಮಾಡೆಲ್ ಆಗಿಯೂ ಜ ನಪ್ರಿಯತೆ ಗಳಿಸಿದ್ದಳು.
ಲಿರಿಲ್, ಲಿಮ್ಕಾ ಜಾಹೀರಾತಿನಲ್ಲೂ ಕಂಗೊಳಿಸಿದ್ದ ಈ ಮುಂಚುವ ಬಳ್ಳಿ, 2006ನೇ ಸಾಳಿನ ಕಿಂಗ್ ಫಿಶರ್ ಕ್ಯಾಲೆಂಡರ್ ನಲ್ಲಿ, ಮಾದಕವಾಗಿ ಕಾಣಿಸಿ ಸುದ್ದಿಯಾಗಿದ್ದಳು.
ಸದ್ಯ ಆಕೆ ಶಾರುಖ್ ನೊಂದಿಗೆ ಓಂ ಶಾಂತಿ ಓಂ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ದೀಪಿಕಾ ಇನ್ನೂ ಎರಡು ಬಾಲಿವುಡ್ ಚಿತ್ರಗಳಿಗೆ ಸಹಿ ಹಾಕಿದ್ದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಶಾರುಖ್ ನೊಂದಿಗೆ ನಟಿಸಲು ಅವಕಾಶ ಸಿಕ್ಕಿರುವುದು ನನಗೆ ಖುಷಿಯ ಸಂಗತಿ ಎಂದು ನುಡಿದಿದ್ದಾಳೆ ದೀಪಿಕಾ.