ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರೇಮ್ ನಿಂದ ಚಿತ್ರ ಕಂಪೆನಿ
ಸುದ್ದಿ/ಗಾಸಿಪ್
Feedback Print Bookmark and Share
 
ನಟ, ನಿರ್ದೇಶಕ ಪ್ರೇಮ್, ಪ್ರೇಮ್ ಫಿಲ್ಮ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯನ್ನು ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಪ್ರೇಮ್ ಕಂಪೆನಿಗೆ ಬಂಡವಾಳ ಹೂಡಲಿದ್ದು, ಪತ್ನಿ ರಕ್ಷಿತಾ ಕಂಪೆನಿಯ ಮುಖ್ಯಸ್ಥರಾಗಲಿದ್ದಾರೆ. ಪ್ರತೀವರ್ಷ ಎರಡು ಕನ್ನ ಡ ಚಿತ್ರಗಳ ನಿರ್ಮಾಣ ಪ್ರೇಮ್ ಉದ್ದೇಶ.

ಈ ಕಂಪೆನಿಯಲ್ಲಿ ಹೊಸ ನಾಯಕ-ನಾಯಕಿಯರಿಗೆ ಅವಕಾಶ ನೀಡುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ ಎನ್ನುತ್ತಾರೆ ಪ್ರೇಮ್. ಅಂದ ಹಾಗೆ ಪ್ರೇಮ್ ಗೆ ಇಂತಹುದೊಂದು ಐಡಿಯಾ ಹೊಳೆದದ್ದು,

ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾರ, ಫಿಲ್ಮ್ ಫ್ಯಾಕ್ಟರಿ ಸಂಸ್ಥೆಯಿಂದ. ವರ್ಮಾ ತಮ್ಮ ಸಂಸ್ಥೆಯ ಮುಖೇನ ವರ್ಷಕ್ಕೆ ಸುಮಾರು 15 ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಇದರಿಂದ ನೂರಾರು ಪ್ರತಿಭೆಗಳಿಗೆ ಅವಕಾಶ ಲಬ್ಯವಾಗುತ್ತಿದೆ. ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರ ಬಿಡುಗಡೆಕಂಡ ಕೂಡಲೇ ಪ್ರೇಮ್ ಫಿಲ್ಮ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯನ್ನು ಪ್ರಾರಂಭಿಸಲಾಗುವುದು. ಕನ್ನಡ ಚಿತ್ರರಂಗದ ಕೆಲ ನಟರು ಈ ಸಂಸ್ಥೆಯಲ್ಲಿ ಹಣವನ್ನು ಹೂಡಲಿದ್ದಾರೆ.

ನಟ ಸುದೀಪ್ ಕೂಡ ಇಂತಹುದೇ ಸಂಸ್ಥೆಯೊಂದನ್ನು ರಚಿಸುವ ಉತ್ಸಾಹದಲ್ಲಿದ್ದಾರೆ. ಈ ಹೊಸ ಸಂಸ್ಥೆಯಿಂದ ಕನ್ನಡ ಚಿತ್ರರಂಗದಲ್ಲಿ ಹೊಸ ಸಂವೇದನೆಯ ಕನ್ನಡ ಚಿತ್ರಗಳನ್ನು ಅಪೇಕ್ಷಿಸಬಹುದು ಎಂಬುದು ಚಿತ್ರ ರಸಿಕರ ಅಭಿಲಾಷೆ.