ಎಕ್ಸ್ಪೋಸ್ ಓಕೆ , ಕಿಸ್ಸ್ ಬೇಡ -ರಾಖಿ ಸಾವಂತ್.
ಬೆಂಗಳೂರು, ಬುಧವಾರ, 4 ಜುಲೈ 2007( 14:36 IST )
ಎಕ್ಸ್ಪೋಸ್ ಓಕೆ ಆದ್ರೆ ಕಿಸ್ಸ್ ಬೇಡ ಎಂದಿದ್ದು ಮಾದಕ ಐಟಂಗರ್ಲ್ ರಾಖಿ ಸಾವಂತ್. ಕನ್ನಡದ ಗೆಳೆಯ ಚಿತ್ರದಲ್ಲಿ ನಟನೆಗೆ ಬಂದಿದ್ದ ರಾ ಖಿ ನಮ್ಮ ಪ್ರತಿನಿಧಿಯೊಂದಿಗೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಹೀಗೆ.
ಕಿಸ್ ಅಂದ್ರೆ ನನಗೆ ತೀವ್ರ ಅಲ ರ್ಜಿ. ತುಟಿಗೆ ತುಟಿಗೆ ಬೆಸೆಯುವ ದೃಶ್ಯ ನೋನೋ... ಕಿಸ್ ಕೊಡಲೇ ಬೇಕು ಎಂದು ಒತ್ತಾಯಿಸಿದ ಚಿತ್ರಗಳಲ್ಲಿ ಅಭಿನಯಿಸೋಲ್ಲ. ಎಕ್ಸ್ಪೋಸ್ ಓಕೆ ಎಂದಿದ್ದಾಳೆ ರಾಖಿ.
ಮಿಖಾ ಸಿಂಗ್ ಕಿಸ್ಸ್ ಪ್ರಕರಣವನ್ನು ಕೇಳಿದ್ರೆ ಅಯ್ಯೋ ಬಿಡಿ, ಅದನ್ನು ಕೇಳಲೇ ಬೇಡಿ, ಆದರೆ ಎಕ್ಸ್ ಫೋಸ್ ಮಾಡುವುದಕ್ಕೆ ಒಂದು ಲಿಮಿಟ್ ಬೇಕು ಎಂದು ಪ್ರತಿಕ್ರಿಯಿಸಿದ್ದಾಳೆ ರಾಖಿ.
ಸಿನೆಮಾದಲ್ಲಿ ಗ್ಲಾಮರ್ ಗರ್ಲ್ ಇರಬಹುದು. ಆದರೆ ತಾನು ಸಂಪ್ರದಾಯದ ಹುಡುಗಿ ಎಂದು ಹೇಳಲು ಆಕೆ ಮರೆಯುವುದಿಲ್ಲ.