ಪುನೀತ್ ಈಗ'ಬಿಂದಾಸ್'
ಬೆಂಗಳೂರು, ಭಾನುವಾರ, 8 ಜುಲೈ 2007( 14:54 IST )
ಪುನೀತ್ ರಾಜ್‌ಕುಮಾರ್ ಅಭಿನಯದ ಚಿತ್ರ 'ಬಿಂದಾಸ್' ಇದೀಗ ಚಿತ್ರೀಕರಣಕ್ಕೆ ಸಿದ್ಧವಾಗಿದೆ. ಪುನೀತ್ ಅವರ ಪ್ರತಿಭೆಯ ಆಯಾಮ ಇದರಲ್ಲಿ ಆರಂಭವಾಗಲಿದೆ.
ಸಿನಿಮಾವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿದ್ದಾರೆ. ಎರಡು ವರ್ಷಕಾಲದ ವಿರಾಮದ ಬಳಿಕ ಅವರಿಂದ ಹೊಸತನದ ನಿರೀಕ್ಷೆ ಇದೆ.ಕರ್ಪೂರದಾ ಗೊಂಬೆ ಹಾಗೂ ಅನ್ನಿಯನ್ ಖ್ಯಾತಿಯ ಚಂದ್ರುಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಪುನೀತ್ ಅವರು ಹೊಸ ಉತ್ಸಾಹದಲ್ಲಿದ್ದಾರೆ. ಅಪ್ಪು ಶೈಲಿಯ ಪ್ರದರ್ಶನ ಈ ಚಿತ್ರದಲ್ಲೂ ಕಾಣಬಹುದು ಎಂಬುದು ಅವರ ಹೇಳಿಕೆ. ಪ್ರೇಕ್ಷಕರಿಗೆ ಮನಮುದನೀಡುವ ಅನೇಕ ಸನ್ನಿವೇಶಗಳು ಚಿತ್ರದಲ್ಲಿದ್ದು, ಸಂಪೂರ್ಣ ಹೊಸತನ, ತನ್ಮಯತೆಯನ್ನು ಭರವಸೆ ನೀಡಿದ್ದಾರೆ.
ನಾಯಕಿಯಾಗಿ ಹಂಸಿಕಾ ಅವರು ಉತ್ತಮ ನಿರೀಕ್ಷೆಯಲ್ಲಿದ್ದಾರೆ. ಚಿತ್ರಕ್ಕಾಗಿ ಗುರುಕಿರಣ್ ಗೀತರಚನೆ , ಸಂಗೀತ ಸಂಯೋಜನೆ ನಡೆಸುತ್ತಿದ್ದಾರೆ.