ಮಲ್ಲಿಕಾಳನ್ನು ಹೊಗಳಿದ ಸುಶ್ಮಿತಾ
ಮುಂಬೈ, ಸೋಮವಾರ, 9 ಜುಲೈ 2007( 16:08 IST )
ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್‌ಗೆ ಮಲ್ಲಿಕಾಳನ್ನು ಕಂಡರೆ ತುಂಬ ಇಷ್ಟ. ಚಿತ್ರರಂಗದಲ್ಲಿ ಮಲ್ಲಿಕಾ ಶೇರಾವತ್ ಕಷ್ಟಪಟ್ಟು ತನ್ನ ಸ್ಥಾನವನ್ನು ಗುರುತಿಸಿಕೊಂಡಿದ್ದಾಳೆ. ಅವಳ ದೈರ್ಯ ಮೆಚ್ಚಬೇಕು ಎಂದು ಮಾಜಿ ವಿಶ್ವ ಸುಂದರಿ, ಮಲ್ಲಿಕಾಳ ಕುರಿತು ಅಣಿಮುತ್ತು ಉದುರಿಸಿದ್ದಾಳೆ.
ನನ್ನ ಅಭಿಪ್ರಾಯದಂತೆ ಅವಳ ದೈರ್ಯ ಮೆಚ್ಚಬೇಕು. ಎಲ್ಲಿಂದಲೊ ಬಂದು ತನ್ನದೆ ಒಂದು ಛಾಪನ್ನು ಚಿತ್ರರಂಗದಲ್ಲಿ ಮೂಡಿಸಬೇಕೆಂದರೆ ಅದು ಅಷ್ಟು ಸುಲಭ ಸಾದ್ಯದ ಮಾತಲ್ಲ. ಮಾಧುರಿ ದಿಕ್ಷಿತ್ ಬಾಲಿವುಡ್ ಚಿತ್ರರಂಗದಲ್ಲಿ ಇದ್ದ ಸಂದರ್ಭದಲ್ಲಿ ನಾನು ಮಿಸ್ ಯುನಿವರ್ಸ್ ಆಗಿ ಚಿತ್ರರಂಗಕ್ಕೆ ಬಂದಿದ್ದೆನೆ.
ಕೆಲವರಿಗೆ ಚಿತ್ರರಂಗದಲ್ಲಿ ಯಶಸ್ಸು ತಕ್ಷಣ ದೊರೆಯುತ್ತದೆ. ಅದು ಜೀವನ. ನಾನು ಚಿತ್ರರಂಗಕ್ಕೆ ಕಾಲಿಟ್ಟ ಸಮಯದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡಿದ್ದೇನೆ. ಈಗಲೂ ತಪ್ಪುಗಳು ಸಂಭವಿಸುತ್ತಿವೆ.ಅದು ಕೂಡ ನಮ್ಮ ವೃತ್ತಿ ಜೀವನಕ್ಕೆ ಅವಶ್ಯಕ ಪಾಠಗಳನ್ನು ಕಲಿಸಿಕೊಡುತ್ತಿದೆ.
ಸುಶ್ ಅಂದರೆ ನನಗೆ ಗುರು ಇದ್ದಂತೆ ಎಂದು ಹೇಳುವ ಮಲ್ಲಿಕಾ ಶೇರಾವತ್, ದಿ ಮಿತ್ ಹಾಲಿವುಡ್ ಚಿತ್ರದ ನಂತರ, ಬಿಲ್‌ಬ್ಯಾನರಮನ್ ಅವರ ಅನ್‌ವೇಯಿಲ್ಡ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಸುದ್ದಿ.