ಹೊಸ ಚಿತ್ರ; ಹೆಸರು ವಾರಸ್ದಾರ
ಬೆಂಗಳೂರು, ಶನಿವಾರ, 14 ಜುಲೈ 2007( 10:14 IST )
ಪತ್ರಕರ್ತ ರವಿಬೆಳಗೆರೆ ಮುಖ್ಯ ಭೂಮಿಕೆಯಲ್ಲಿ ನೂತನ ಚಿತ್ರವೊಂದು ತೆರೆಕಾಣುತ್ತಿದೆ. ಚಿತ್ರದ ಹೆಸರು ವಾರಸ್ದಾರ. ಈ ಚಿತ್ರ ರವಿಬೆಳಗೆರೆ ಹೆಸರಿಗಷ್ಟೇ ಅಭಿನಯಿಸುತ್ತಿಲ್ಲ. ಫುಲ್ ಪ್ಲೆಜ್ ಆಗಿ ಅಭಿನಯಿಸುತ್ತಾರಂತೆ.
ನ್ಯಾಯಕ್ಕಾಗಿ ಹೋರಾಡುವ ಕಥೆಯಂತೆ. ಜನಸಾಮಾನ್ಯರಿಗೆ ದಿನಿತ್ಯದ ಬದುಕಿನಲ್ಲಿ ಶೋಷಣೆ ನಡೆಯುತ್ತಲೇ ಇರುತ್ತದೆ. ಈ ರೀತಿ ಅನ್ಯಾಯಕ್ಕೆ ಒಳಗಾಗುವ ಮಂದಿಗೆ ನ್ಯಾಯ ಕೊಡುವುದು ಇಲ್ಲಿ ರವಿಬೆಳಗೆಯ ಉದ್ದೇಶ. ಅನ್ಯಾಯದ ವಿರುದ್ಧ ಹೋರಾಡುವ ಪತ್ರಕರ್ತನ ದಿಟ್ಟತನ ಚಿತ್ರದಲ್ಲಿ ರೂಪುಗೊಳ್ಳಲಿದೆ.
ಇದು ನ್ಯಾಯದ ವಾರಸ್ದಾರನ ಚಿತ್ರ. ಚಿತ್ರದ ಕಥೆಯನ್ನು ಬರೆಯುವ ವೇಳೆ ಪ್ರಸಿದ್ಧ ವ್ಯಕ್ತಿಯೋರ್ವರು ನ್ಯಾಯವನ್ನು ನೀಡಲು ಆಯ್ಕೆ ಮಾಡ ಬೇಕು ಎಂದು ಚಿಂತನೆ ನಡೆಸಿದ ನಿರ್ದೇಶಕ ಗುರುದೇಶಪಾಂಡೆಗೆ ಹೊಳೆದದ್ದು ರವಿಬೆಳಗೆರೆ.
ಚಿತ್ರದ ಬಗ್ಗೆ ಬೆಳಗೆರೆ ಹೇಳಿದ್ದಿಷ್ಟು : ನಾನು ಈ ಚಿತ್ರದ ಡ್ಯುಯೆಟ್ ನಲ್ಲಿ ಹಾಡುತ್ತಿಲ್ಲ. ನನಗೊಂದು ಪ್ರಮುಖ ಕ್ಯಾರೆಕ್ಟರ್ ಇದೆ. ಅದನ್ನು ನಿರ್ವಹಿಸಬೇಕಾಗಿದೆ.ಬರವಣಿಗೆಯಿಂದ ಚಿತ್ರರಂಗದತ್ತ ಹೆಚ್ಚು ಆಸಕ್ತಿ ವಹಿಸಲು ಕಾರಣವೇನು ಎಂಬ ಪ್ರಶ್ನೆಗೆ ಅರೆರೆ, ಬರೆಯುತ್ತಲೇ ಇದ್ದೇನೆ. ನಟಿಸೋದು ನನಗೆ ಹವ್ಯಾಸ.
ಇಂದು ಚಿತ್ರರಂಗ ತಂಬಾನೇ ಪ್ರಗತಿಯನ್ನು ಕಾಣುತ್ತಿದೆ. ಈ ಹಿಂದಿನಿಂದಲೂ ನಾನು ಚಿತ್ರರಂಗದ ಬಗ್ಗೆ ನಿರೀಕ್ಷೆಯನ್ನು ಇರಿಸಿಕೊಂಡವನು. ಅದಕ್ಕೆ ನಟಿಸುತ್ತಿದ್ದೇನೆ. ಸಂದೀಪ್ ಮತ್ತು ಅಶ್ವಿನಿ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾಜೇಶ್ ರಾಮನಾಥ್ ಅವರ ಸಂಗೀತವಿದೆ.