ಮೇಘವೇ ...:ವಲಸೆಯ ಕಥೆ
ಗಾಂಧಿನಗರ(ಬೆಂಗಳೂರು), ಶನಿವಾರ, 14 ಜುಲೈ 2007( 17:36 IST )
ಕರ್ನಾಟಕದಿಂದ ಮೂವತ್ತು ವರ್ಷಗಳ ಹಿಂದೆ ದೇಶಾಂತರ ಹೋದ ಒಂದು ಕುಟುಂಬ ನೇಪಾಳದಲ್ಲಿ ನೆಲೆ ನಿಲ್ಲುತ್ತದೆ.
ಆಗರ್ಭ ಶ್ರೀಮಂತವಾಗಿರುವ ಈ ಕುಟುಂಬದ ಸುತ್ತ ಹೆಣೆದಿರುವ ಕಥೆಯನ್ನು ಒಳಗೊಂಡಿರುವ ಚಿತ್ರ ಮೇಘವೇ ...ಮೇಘವೇ.ಶೇ 80ರಷ್ಟು ಚಿತ್ರೀಕರಣವನ್ನು ನೇಪಾಳದಲ್ಲಿ ನಡೆಸಲು ಉದ್ದೇಶಿಸಲಾಗಿದೆ.
ಚಿತ್ರೀಕರಣ ನಡೆಸಲು ತುದಿಗಾಲ ಮೇಲೆ ನಿಂತಿರುವ ನಿರ್ದೇಶಕ ವಿ. ನಾಗೇಂದ್ರಪ್ರಸಾದ್ ಕಥೆಯೊಂದನ್ನು ಬಿಟ್ಟು ಉಳಿದೆಲ್ಲಾ ಸಂಗತಿಗಳನ್ನು ಬಿಡಿಸಿಟ್ಟರು. ಕಥೆ ಮಾತ್ರ ಕೇಳಬೇಡಿ ಎಂದು ಕೈ ಮುಗಿದರು.ಈ ಚಿತ್ರ ಪ್ರೇಮ ಕಥೆಯೊ, ದ್ವೇಷದ ಕಥೆಯೊ ಅನ್ನುವ ಕೂತುಹಲದಲ್ಲಿಯೇ ಸಾಗುತ್ತದೆ.
ಕಥೆಗೆ ನೇಪಾಳದ ದೃಶ್ಯಗಳು ಅನುವಾರ್ಯವಾಗಿದ್ದರಿಂದ ಅಲ್ಲಯೇ ಚಿತ್ರೀಕರಣ ಮಾಡಲು ನಿರ್ಧರಿಸಿದ್ದೇವೆ. ಕಲಾವಿದರು ತಂತ್ರಜ್ಞರನ್ನೊಳಗೊಂಡ 45 ಜನರ ತಂಡ 30 ದಿನಗಳ ಚಿತ್ರೀಕರಣದಲ್ಲಿ ಭಾಗವಹಿಸಲಿದೆ.
ಈಗಾಗಲೇ 30 ಜನರ ತಂಡ ನೇಪಾಳಕ್ಕೆ ಪ್ರಯಾಣ ಬೆಳೆಸಿದ್ದು, ಇನ್ನೂಳಿದವರು ಅವರನ್ನು ಸೇರಿಕೊಳ್ಳಲಿದ್ದಾರೆ ಎಂದರು ನಾಗೇಂದ್ರಪ್ರಸಾದ್.ಈ ಚಿತ್ರಕ್ಕೆ ನಾಯಕಿಯನ್ನು ಹುಡುಕುವಾಗ ಗ್ರೇಸಿ ಸಿಂಗ್‌ರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ.