ಹೊಸಚಿತ್ರ ಪ್ರೀತಿ ಜೋಪಾನ..
ಗಾಂಧಿನಗರ(ಬೆಂಗಳೂರು), ಭಾನುವಾರ, 15 ಜುಲೈ 2007( 17:50 IST )
ಆರಂಭದಲ್ಲಿ ಪ್ರೀತಿ ಇರುತ್ತೆ. ಆಮೇಲೆ ಕಡಿಮೆಯಾಗುತ್ತಾ,ಕೊನೆಗೆ ಅದನ್ನು ಯಾರು ಜೋಪಾನ ಮಾಡದ ಕಾರಣ ಕಳೆದುಹೋಗುತ್ತದೆ. ಇದರಿಂದ ರಾಗ ದ್ವೇಷಗಳು ಆರಂಭವಾಗುತ್ತವೆ.
ಇದು ಪ್ರೀತಿಯ ಕುರಿತು ನಿರ್ದೆಶನದ ಅಖಾಡಕ್ಕೆ ಹೊಸದಾಗಿ ಇಳಿದಿರುವ ಬಿ.ಎಚ್.ಬಸವರಾಜರ ವಾಖ್ಯಾನ. ಅವರ ಚಿತ್ರದ ಹೆಸರು ಜೋಪಾನ. ಪ್ರೀತಿಯನ್ನು ಕಾಪಾಡುವುದು ಹೇಗೆ ಎನ್ನುವುದು ಚಿತ್ರೀಕಥೆಯ ಹೂರಣ.ಈಗ ಪ್ರೀತಿ ಎಲ್ಲೆಲ್ಲೊ ಹೋಗ್ತಾ ಇದೆ.
ಅದನ್ನು ಉಳಿಸಿಕೊಳ್ಳುವುದು ನನ್ನ ಕಳಕಳಿ ಅಷ್ಟೇ. ಪ್ರೀತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗದವರು ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳನ್ನು ಇಂದು ಅನೇಕ ಕಡೆ ನೋಡುತ್ತೇವೆ ಹಾಗಾಗಬಾರದು. ಎಂದು ಬಸವರಾಜ್ ಕಳಕಳಿ ಮೆರೆದರು.
ಚಿತ್ರದ ನಾಯಕ ಪ್ರದೀಪ್ ಹೊಸ ಪರಿಚಯ. ಚಿತ್ರದ ನಾಯಕಿ ನಿಶಾ ಶೆಟ್ಟಿ ಈಗಾಗಲೇ ಹ್ಯಾಪಿ ನ್ಯೂ ಇಯರ್ ಎನ್ನುವ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.. ಪಿಯುಸಿ ಓದಿವದರ ಜೊತೆಗೆ ಸಿನಿಮಾದಲ್ಲಿ ನಟಿಸುವುದು ಒಂದು ರೀತಿ ಇಷ್ಟವಂತೆ.