ವೀಕ್ಷಕರಿಗಾಗಿ ಹನಿ ಹನಿ..ಮಳೆ
ಗಾಂಧಿನಗರ(ಬೆಂಗಳೂರು), ಭಾನುವಾರ, 15 ಜುಲೈ 2007( 17:51 IST )
ವೀರಕುಮಾರ್ , ಎಂ ಚಂದ್ರ, ಎಂರಾಜು ನಿರ್ಮಾಣದ ಶರಣ ನಿರ್ದೇಶನದ ಹನಿ ಹನಿ ಚಿತ್ರಕ್ಕೆ ಕೆಂಗೇರಿ ಎಸ್ಟೇಟ್ ಮನೆಯೊಂದರಲ್ಲಿ ಬಹುಪಾಲು ಕಲಾವಿದರು ಪಾಲ್ಗೊಂಡಿದ್ದು ಹನಿಹನಿ ಸೇರಿ ಮಳೆಯಾಯಿತು..ತೆನೆ ತೆನೆ ರಾಶಿ ಬೆಳೆಯಾಯಿತು.
ನಮಗೆ ಮೂಲ ಅಜ್ಜ ಅಜ್ಜಿ ತಾನೇ ,ಮೊದಲ ದೈವ ನಮ್ಮ ಅಪ್ಪ ಅಮ್ಮಾನೇ... ಎಂಬ ಹಾಡಿನ ದೃಶ್ಯವನ್ನು ಚಿತ್ರೀಕರಿಸಲಾಯಿತು. ಸಂಭಾಷಣೆ ರಾಮ್ ನಾರಾಯಣ್ ಛಾಯಾಗ್ರಹಣ ಎಂ. ಆರ್. ಸೀನು, ಸಂಗೀತ ಚಿನ್ನ ,ಸಂಕಲನ, ಶ್ರೀನಿವಾಸ್ ಬಾಬು, ಸಾಹಸ ರವಿವರ್ಮಾ, ಕೌರವ ವೆಂಕಟೇಶ, ಸಹನಿರ್ದೇಶನ ಸೋಮು ನಿರ್ವಹಣೆ ಉಮೇಶ್‌ಕುಮಾರ್.
ತಾರಾಗಣದಲ್ಲಿ ತರುಣ್ , ಸಂಜನಾ ಗಾಂಧಿ,ರಂಗಾಯಣ ರಘು, ಜೈಜಗದೀಶ, ಭವ್ಯಲೋಕನಾಥ್, ಚಿತ್ರಾ ಶಣೈ, ದತ್ತಣ್ಣ, ಮೀನಾಕ್ಷಿ, ಸಿಹಿಕಹಿ ಚಂದ್ರು, ವಿಜಯ ಸಾರಥಿ, ಲತಾ, ರವಿ ಮುಂತಾದವರು ಅಭಿನಯಿಸುತ್ತಿದ್ದಾರೆ.