ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗೆಳೆಯ ಚಿತ್ರದಲ್ಲಿ ರಾಖಿ ಸಾವಂತ್...
ಸುದ್ದಿ/ಗಾಸಿಪ್
Feedback Print Bookmark and Share
 
ಕಣ್ಣಿನಲ್ಲಿ ನಿಗಿನಿಗಿ ಕೆಂಡ, ಆಕೆ ನೋಡಿದಲ್ಲೆಲ್ಲಾ ಬೆವರು,ಉಸಿರು ಬಿಟ್ಟರೆ ಹೂವು. ನೆಲದ ಪಾಲು ಬಾಯಿತೆರೆದರೆ ಹಲ್ ಚಲ್. ಇದು ಬಾಲಿವುಡ್ ಬೆಡಗಿ ರಾಖಿ ಸಾವಂತ್ ಎನ್ನುವ ಐಟಂ ಹುಡುಗಿಯ ಅಸಾಮಾನ್ಯ ವರ್ಣನೆ.

ಮೊದಲ ಬಾರಿಗೆ ರಾಖಿ ಕನ್ನಡಕ್ಕೆ ಬಂದಿದ್ದಾಳೆ. ಗೆಳೆಯ ಚಿತ್ರದಲ್ಲಿ ನಾಯಕ ನಟ ಪ್ರಜ್ವಲ್ ಅವರೊಂದಿಗೆ ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದಾಳೆ. ನನಗೆ ಸೀರೆ ಅಂದರೆ ತುಂಬಾ ಇಷ್ಟ. ಅದರಲ್ಲಿ ಹೆಚ್ಚು ಸುಂದರವಾಗಿ ಕಾಣುತ್ತೇನೆ.ನಾಯಕಿ ಪಾತ್ರ ಕೊಟ್ಟರು ನಾನು ನಟಿಸಲು ಸಿದ್ದ. ನನಗೆ ಬಾಲಿವುಡ್‌ನಲ್ಲಿ ಯಾರು ಸ್ಪರ್ಧಿಗಳಿಲ್ಲ.ಯಾನಾ ಗುಪ್ತಾಗೆ ಮಾರ್ಕೆಟ್ ಇಲ್ಲ ನನಗೆ ಎಲ್ಲಾ .. ಮತ್ತೆ ನಕ್ಕಳು.

ಕಪ್ಪು ಡ್ರೆಸ್‌ನಲ್ಲಿ ನಾಯಕ ನಟ ಪ್ರಜ್ವಲ್ ಜೊತೆಯಲ್ಲಿ ಎಂಟಿವಿ ಮಾದರಿ ಸೆಟ್‌ನಲ್ಲಿ ಕುಣಿದು ಬಂದು ನಾನು ರಾಖಿ ಅಭಿಮಾನಿ ಎಂದು ನಾಯಕ ನಟ ಪ್ರಜ್ವಲ್ ಹೇಳಿದರು.

ನಾನು ಇತ ಮಾಡುವ ನಟನೆ ನೋಡಿಲ್ಲ. ಆದರೆ ತುಂಬಾ ಅದ್ಬುತವಾಗಿ ಡಾನ್ಸ್ ಮಾಡುತ್ತಾನೆ ಎಂದು ಸಹನಟನನ್ನು ಹೊಗಳಿದರು.ಹೀಗೆ ರಾಖಿ ಎನ್ನುವ ಹಾಟ್ ಸಂಪಿಗೆ ಕನ್ನಡ ಚಿತ್ರರಂಗಕ್ಕೆ ಲಗ್ಗೆ ಹಾಕಿದ್ದಾಯಿತು ಮುಂದೆ ನಿರ್ದೆಶಕರು ನಾಯಕಿ ಪಾತ್ರ ಕೊಟ್ಟರೆ ಕನ್ನಡಕ್ಕೆ ಹೊಸ ಚರಿತ್ರೆ ಬರೆಯಲು ರಾಖಿ ಸಿದ್ದವಾಗಿದ್ದಾಳೆ.