ಲೈಫ್ ಆರಾಮ್ ಎನ್ನುತ್ತಾರೆ : ರಕ್ಷಿತಾ
ಸೋಮವಾರ, 16 ಜುಲೈ 2007( 20:22 IST )
ನಟ, ನಿರ್ದೇಶಕ ಪ್ರೇಮ್ ಮದುವೆಯಾಗಿ 4 ತಿಂಗಳು ಕಳೆದಿದೆ. ರಕ್ಷಿತಾಳಿಗೆ ಐವಾಹಿಕ ಜೀವನ ಖೂಷಿ ಕೊಟ್ಟಿದೆಯಂತೆ. ಪ್ರೇಮ್ ನೊಂದಿಗೆ ಆರಾಮಾಗೇ ಇದ್ದೀನಿ. ಮನೇಲಂತೂ ಏನೂ ಟೆನ್ಷನ್ ಇಲ್ಲವೇ ಇಲ್ಲ ಅನ್ನುತ್ತಾಳೆ ಈ ಬೆಡಗಿ.
ಮೊದಲಾದ್ರೆ, ಶೂಟಿಂಗ್, ಬಿಜಿ ಇತ್ತು. ಆದ್ರೆ ಮದುವೆ ಯಾದ ಮೇಲೆ ಯಾವುದೇ ಚಿತ್ರದಲ್ಲೂ ನಟಿಸೋದಕ್ಕೆ ಆಸಕ್ತಿ ತೋರುತ್ತಿಲ್ಲ. ನಮ್ಮದೇ ಆಗಿರುವ ಪ್ರೇಮ್ ಫಿಲ್ಮ್ ಕಾರ್ಪೊರೇಷನ್ ಲಿಮಿಟೆಡ್, ಆರಂಭಿಸುವ ಹಂತದಲ್ಲಿದ್ದೇವೆ.
ಹೊಸ ಸಂಸ್ಥೆಯನ್ನು ಹೇಗೆ ರೂಪಿಸಬೇಕು, ಎಂಬ ಬಗ್ಗೆ ಡೀಪಾಗಿ ಥಿಂಕ್ ಮಾಡ್ದಿದ್ದೀನಿ ಎಂಬುದು ರಕ್ಷಿತಾ ಪ್ರವರ.
ಆದ್ರೆ ಪ್ರೇಮ್ ಚಿತ್ರೀಕರಣಕ್ಕೆ ವಿ ದೇಶಕ್ಕೆ ಹೋದ್ರೆ ತಾನೂ ಅವರನ್ನು ಹಿಂಬಾಲಿಸುತ್ತೇನೆ. ಅವರ ಆರೋಗ್ಯವನ್ನು ಕಾಪಾಡೋದು ನನ್ನ ಕೆಲಸವಲ್ವೇ ಅನ್ನೋದು ರಕ್ಷಿತಾ ಪ್ರಶ್ನೆ.