ಗಾಯಕಿಜಾನಕಿಗೆ 50ರ ಸನ್ಮಾನ
ಬೆಂಗಳೂರು, ಮಂಗಳವಾರ, 17 ಜುಲೈ 2007( 17:46 IST )
ಕನ್ನಡದ ಕೋಗಿಲೆ ಜಾನಕಿ ಕನ್ನಡ ಚಿತ್ರರಂಗದ ಒಡನಾಟ ವಿಟ್ಟು 50 ವರ್ಷ. ಹಿರಿಯ ಗಾಯಕಿಯಾಗಿ ಕನ್ನಡ ನಾಡಿನಾದ್ಯಂತ ಮನೆಮಾತಾಗಿರುವ ಜಾನಕಿಯವರಿಗೆ ಜುಲೈ 28ರಂದು ಸನ್ಮಾನ ಸಂಭ್ರಮ.
ಕನ್ನಡದವರಲ್ಲದಿದ್ದರೂ ಕನ್ನಡ ಹಾಡುಗಳನ್ನು ಸ್ಪಷ್ಟವಾಗಿ, ಸುಮಧುರವಾಗಿ ಹಾಡುವ ಮುಖೇನ ಮನೆಮಾತಾದವರು ಜಾನಕಿ. ಈ ಹಿನ್ನೆಲೆಯಲ್ಲಿ ನಾಡ ದೇವತೆ ಎಸ್.ಜಾನಕಿ ಅಭಿನಂದನಾ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.
ಸಮಾರಂಭದಲ್ಲಿ ಹಿರಿಯ ನಟಿ ಬಿ.ಸರೋಜಾ ದೇವಿ ಭಾಗವಹಿಸಲಿದ್ದಾರೆ. ಜಯಂತಿ, ಹರಿಣಿ, ಆರ್.ಎನ್.ಜಯಗೋಪಾಲ್, ಹಂಸಲೇಖ ಹೀಗೆ ಹಲವಾರು ಕಲಾವಿದರೂ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅಂದು ಸಂಜೆ ನಗರದಲ್ಲಿ ಗೀತನಮನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.
ಕನ್ನಡಕ್ಕಾಗಿ ಇಷ್ಟು ಸುದೀರ್ಘ ಸೇವೆ ಸಲ್ಲಿಸಿದ ಜಾನಕಿ ಯವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿಲ್ಲ ಎಂಬ ನಿರಾಸೆಯನ್ನು ಈ ಹಿಂದೆಯೇ ವ್ಯಕ್ತಪಡಿಸಿದ್ದರು. ಸರ್ಕಾರದ ಪ್ರಶಸ್ತಿಗಿಂತ ಇದು ದೊಡ್ಡ ಗೌರವವಾಗಿದೆ.