ಮೀರಾಮಾಧವ ರಾಘವ:ಪ್ರಶಂಸೆ
ಬೆಂಗಳೂರು, ಮಂಗಳವಾರ, 17 ಜುಲೈ 2007( 17:56 IST )
ಕಿರುತೆರೆ ಯಶಸ್ವೀ ನಿರ್ದೇಶಕ ಟಿ.ಎನ್.ಸೀತಾರಾಂ ಅವರ ಬಹು ನಿರೀಕ್ಷೆಯ ಚಿತ್ರ ಮೀರಾ ಮಾಧವ ರಾಘವದ ಬಿಡುಗಡೆ ಮೊದಲೇ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ.
ಇನ್ನೇನು ಬಿಡುಗಡೆಗೆ ಕಾಯುತ್ತಿರುವ ಈ ಚಿತ್ರವನ್ನು ಸೀತಾರಾಂ ಕೆಲ ಆಯ್ದ ವ್ಯಕ್ತಿಗಳಿಗೆ ತೋರಿಸಿದ್ದು ಅವರೆಲ್ಲಾ ಚಿತ್ರದ ಬಗ್ಗೆ ಮನಸಾರೆ ಹೊಗಳಿದ್ದಾರೆ. ಇದು ಚಿತ್ರದ ಬಗ್ಗೆ ತಾನು ಮತ್ತಷ್ಟು ಹೋಪ್ ಬೆಳೆಸಿಕೊಳ್ಳುವುದಕ್ಕೆ ಕಾರಣ ಎಂಬುದು ಸೀತಾರಾಂ ಅನಿಸಿಕೆ.
ನಿರ್ದೇಶಕ ಹಂಸ ಲೇಖಾ ಅವರಂತೂ ಪುಟ್ಟಣ್ಣ ಕಣಗಾಲ್ ನಂತರದಲ್ಲಿ ಚಿತ್ರರಂಗದಲ್ಲಿ ಅಂಥದೇ ಚಿಂತನೆಯ ನಿರ್ದೇಶಕರಿಗೆ ಬರವಿತ್ತು. ಆದರೆ ಸೀತಾರಾಂ ಅಂಥದೇ ಚಿಂತನೆಯ ಯಶಸ್ವೀ ನಿರ್ದೇಶಕರು ಎಂಬಂತೆ ಹೊಗಳಿದ್ದಾರೆ.
ಈ ನಡುವೆ ಪತ್ರಕರ್ತ ರವಿಬೆಳಗರೆ ಚಿತ್ರವನ್ನು ಮನಸಾರೆ ಅನುಭವಿಸಿದ್ದಾರೆ. ಖುಷಿ ಪಟ್ಟಿದ್ದಾರೆ. ರಮ್ಯಾಳಂತೂ ಚಿತ್ರದಲ್ಲಿ ಪಕ್ಕಾ ಗೌರಮ್ಮನಂತೆಯೇ ಕಾಣಿಸಿಕೊಂಡಿದ್ದು, ಎಲ್ಲೂ ಎಕ್ಸ್ಫೋಸಿಂಗ್ ಗೆ ಅವಕಾಶನೇ ಈಡಿಲ್ಲ ಎಂಬುದು ಹೈಲೈಟ್. ಈ ನಡುವೆ ಂಸಲೇಖಾ ವಿಭಿನ್ನ ಸಂಗೀತವನ್ನು ನೀಡಿದ್ದಾರೆ.
ಇತ್ತೀಚೆಗೆ ನಗರದಲ್ಲಿ ಚಿತ್ರದ ಕ್ಯಾಸೆಟ್ ಬಿಡುಗಡೆ ಸಮಾರಂಭವೂ ನಡೆದಿದೆ. ಒಟ್ಟಾರೆ ಕನ್ನಡ ಚಿತ್ರ ಪ್ರೇಮಿಗಳು ಚಿತ್ರವನ್ನು ಎಷ್ಟು ಒಪ್ಪಿಕೊಳ್ಳು ತ್ತಾರೆ ಎಂಬುದು ಪ್ರಶ್ನೆ