ಕನ್ನಡದ ಸಂಜನಾ ಮೋಹನ್‌ಲಾಲ್ ಜೋಡಿ
ತಿರುವನಂತಪುರಂ, ಸೋಮವಾರ, 23 ಜುಲೈ 2007( 11:20 IST )
ಕನ್ನಡ ಸಿನಿರಂಗದ ಗ್ಲಾಮರ್ ಬೆಡಗಿ ಸಂಜನಾ ಮಲೆಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸುತ್ತಿದ್ದಾರೆ. ಸಂಜನಾ ಅವರ ವೃತ್ತಿಜೀವನದಲ್ಲಿ ಇದೊಂದು ಲಾಂಗ್‌ಜಂಪ್ ಎಂಬ ಹೇಳಿಕೆಯೂ ಇದೆ.
'ಗಂಡಹೆಂಡತಿ' ಸಿನೆಮಾದಲ್ಲಿ ಬಿಂದಾಸ್ ಅಭಿನಯದ ಗ್ಲಾಮರ್ ಮೂಲಕ ರಸಿಕರ ಮನಗೆದ್ದ ಬೆಡಗಿ ಸಂಜನಾ ಇದೀಗ ಮಲೆಯಾಳಂ ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ.
ಪ್ರಸ್ತುತ ಮೋಹನ್‌ಲಾಲ್ ಸಿನೆಮಾವನ್ನು ರಂಜಿತ್ ನಿರ್ದೇಶಿಸುತ್ತಿದ್ದಾರೆ. ಜುಲೈ ತಿಂಗಳಲ್ಲೇ ಟಚಿತ್ರೀಕರಣ ಆರಂಭವಾಗಲಿದೆ ಎಂದು ಮಲಿವುಡ್ ಮೂಲಗಳು ತಿಳಿಸಿವೆ. ಅಂತೂ ಸಂಜನಾ ಹ್ಯಾಪಿಯಾಗಿದ್ದಾರೆ.
ಸಂಜನಾ-ಲಾಲ್ ಅಭಿನಯದ ಮಲೆಯಾಳಂ ಚಿತ್ರದ ಹೆಸರು ಇನ್ನೂ ಬಹಿರಂಗವಾಗಿಲ್ಲ. ಆದರೆ ಸಹಿಯಾಗಿದೆ. ಗಂಡ ಹೆಂಡತಿ ಸಿನೆಮಾ ಬಳಿಕ ಸಂಜನಾ ಖಾಲಿಯಿದ್ದರು. ಈ ಕುರಿತು ಕೇಳಿದರೆ ಗುಣಮಟ್ಟದ ಚಿತ್ರ ಬಂದಿರಲಿಲ್ಲ ಹಾಗಾಗಿ ಒಪ್ಪಲಿಲ್ಲ ಎನ್ನುತ್ತಾರೆ.