ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಂಜನಾಗೆ ಹೊಸ ಅವಕಾಶಗಳ 'ಮಿಲನ'
ಸುದ್ದಿ/ಗಾಸಿಪ್
Feedback Print Bookmark and Share
 
ಕನ್ನಡದ ಸೂಪರ್ ಹಿಟ್ ಚಿತ್ರ 'ಮುಂಗಾರು ಮಳೆ' ಮಳೆಯ ಮೂಲಕ ಪೂಜಾ ಆಗಿ ಬದಲಾದ ಸಂಜನಾ ಗಾಂಧಿಯನ್ನು ಈಗ ಹೊಸ ಅವಕಾಶಗಳು ಕೈಬೀಸಿ ಕರೆಯತೊಡಗಿವೆ.

ಮುಂಗಾರು ಮಳೆಯಲ್ಲಿ ಜೊತೆಯಾಗಿದ್ದ ಗಣೇಶ್ ಹಾಗೂ ಸಂಜನಾ ಇನ್ನೊಮ್ಮೆ ಹೊಸ ಚಿತ್ರವೊಂದರಲ್ಲಿ ಒಗ್ಗೂಡುತ್ತಿದ್ದಾರೆ. ಹೊಸ ಚಿತ್ರ 'ಕೃಷ್ಣ'. ಇದು ಮುಂಗಾರು ಮಳೆಯಂತೆಯೇ ವಿಕ್ಷಕರ ಬಹುನಿರೀಕ್ಷೆಗೆ ಕಾರಣವಾಗಿದೆ.

ಪುನೀತ್ ರಾಜ್‌ಕುಮಾರ್ ನಾಯಕನಾಗಿರುವ ಹೊಸ ಚಿತ್ 'ಮಿಲನ'ದಲ್ಲಿ ಸಂಜನಾ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ. ಪಾರ್ವತಿ ಮುಖ್ಯಭೂಮಿಕೆಯಲ್ಲಿರುತ್ತಾರೆ.

ಪ್ರಸ್ತುತ ಚಿತ್ರವನ್ನು ಪ್ರಕಾಶ್ ನಿರ್ದೇಶಿಸುತ್ತಿದ್ದು, ದುಷ್ಯಂತ್ ನಿರ್ಮಾಣವಿದೆ. ಮಿಲನದಲ್ಲಿ ಪುನೀತ್ ಅವರ ಸಂಗಾತಿಯ ಪೂರ್ವಕಾಲ ಕಥೆಯಲ್ಲಿ ಪೂಜಾ(ಸಂಜನಾ)ಳ ಪ್ರವೇಶವಾಗುತ್ತದೆ.

ಸಂಜನಾ (ಪೂಜಾ) ಅವರ ಇನ್ನೊಂದು ಬಹು ನಿರೀಕ್ಷೆಯ ಚಿತ್ರ ಜಗ್ಗೇಶ್ ಅಭಿನಯದ 'ಕೋಡಗನ ಕೋಳಿನುಂಗೈತೆ'. ಇದರಲ್ಲಿ ಈಕೆ ನಾಯಕಿ.

ಇದೇ ತಾರೆಯ ಅಭಿನಯವಿರುವ ತರುಣ್ ನಾಯಕನಾಗಿರುವ ಚಿತ್ರ 'ಹನಿಹನಿ'ಯ ಚಿತ್ರೀಕರಣ ಪ್ರಗತಿಯಲ್ಲಿದೆ. ಮುಂಗಾರು ಮಳೆಯ ಬಳಿಕ ತನ್ನ ಕೈಸೇರುವ ಎಲ್ಲಾ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಸಂಜನಾಗೆ ಇದೀಗ ವೃತ್ತಿರಂಗದಲ್ಲಿ ಅವಕಾಶಗಳ ಸುರಿಮಳೆ ಸುರಿಯುತ್ತಿದೆ ಎಂದೇ ಹೇಳಬೇಕಾಗುತ್ತದೆ.