ಸೆಟ್ಟೇರಿದ 'ವಾರಸ್ದಾರ'
ಬೆಂಗಳೂರು, ಬುಧವಾರ, 25 ಜುಲೈ 2007( 19:06 IST )
ಕನ್ನಡ ಪತ್ರಿಕೋದ್ಯಮದಲ್ಲಿ ರವಿ ಬೆಳಗೆರೆ ಒಂದು ಅಭೂತ ಪೂರ್ವ ಹೆಸರು. ಸಾಹಿತ್ಯ ಕ್ಷೇತ್ರದ ದಾಖಲೆ ವೀರನೀಗ ಚಿತ್ರರಂಗದಲ್ಲೂ ಹಿಂದೆ ಬಿದ್ದಿಲ್ಲ. ವಾರಸ್ದಾರ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಇದೀಗ ಸೆಟ್ಟೇರುತ್ತಿದ್ದಾರೆ.
ಈ ಚಿತ್ರದ ಮಹೂರ್ತ ಇತ್ತೀಚೆಗೆ ಶೂಟಿಂಗ್ ಟೆಂಪಲ್ ಎಂದೇ ಹೆಸರಾದ ಬನಶಂಕರಿಯ ಧರ್ಮಗಿರಿ ಮಂಜುನಾಥ ಸ್ವಾಮಿ ಆಲಯದಲ್ಲಿ ನೆರವೇರಿತು. ನೊಂದವರಿಗೆ ಸಾಂತ್ವನ ನೀಡುವ ವಾರಸ್ದಾರ ಸಮಾಜ ಸೇವಾ ಪರ.
ಪೊಲೀಸ್ ಇಲಾಖೆಯಿಂದಾಗದ, ಕಾನೂನಿನ ಮೂಲಕ ಸರಿಪಡಿಸಲಾಗದ ಸಮಸ್ಯೆಗಳಿಗೆಲ್ಲಾ ಪರಿಹಾರ ಕೊಡಬಲ್ಲ ವಾರಸ್ದಾರನ ಹಿನ್ನೆಲೆ ಏನು ಎಂಬುದೇ ಚಿತ್ರದ ಕೌತುಕ.
ಈಗಾಗಲೇ ರವಿ ಬೆಳೆಗೆರೆಯವರು ಕೆಲವು ಚಿತ್ರಗಳಲ್ಲಿ ನಟಿಸಿದ್ದರೂ ಕೂಡಾ,ಅದು ಪೂರ್ಣ ಪ್ರಮಾಣದಲ್ಲಿ ಆಗಿರಲಿಲ್ಲ.ಪತ್ರಿಕೋದ್ಯಮಿಯಾಗಿ,ಸಾಹಿತಿಯಾಗಿ,ವಾಗ್ಮಿಯಾಗಿ ಹೆಸರು ಪಡೆದಿದ್ದ ಬೆಳೆಗೆರೆ ಇದೀಗ ಬೆಳ್ಳೆಪರದೆ ಮೂಲಕ ರಾರಾಜಿಸಲು ಹೊರಟಿದ್ದಾರೆ.